Sunday, April 28, 2024
Homeಕರಾವಳಿಉಡುಪಿಕುಂದಾಪುರ: ಗಾಳಿ-ಮಳೆಗೆ ಮರ ಬಿದ್ದು ಮನೆಗಳಿಗೆ ಹಾನಿ: ಮನೆಯೊಳಗಿದ್ದ ಹಸುಗೂಸುಗಳು ಪ್ರಾಣಾಪಾಯದಿಂದ ಪಾರು

ಕುಂದಾಪುರ: ಗಾಳಿ-ಮಳೆಗೆ ಮರ ಬಿದ್ದು ಮನೆಗಳಿಗೆ ಹಾನಿ: ಮನೆಯೊಳಗಿದ್ದ ಹಸುಗೂಸುಗಳು ಪ್ರಾಣಾಪಾಯದಿಂದ ಪಾರು

spot_img
- Advertisement -
- Advertisement -

ಕುಂದಾಪುರ: ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಮಳೆಯಾಗುತ್ತಿದ್ದು, ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಸಾಂತಾವರ ಎಂಬಲ್ಲಿ ಎರಡು ಮನೆಗಳಿಗೆ ಹಾನಿಯುಂಟಾಗಿದೆ.

ಕಂದಾವರ ಗ್ರಾ.ಪಂ ವ್ಯಾಪ್ತಿಯ‌ ಸಾಂತಾವರದಲ್ಲಿ  ಶಾರದಾ ದೇವಾಡಿಗ, ಬಾಬಿ ದೇವಾಡಿಗ ಎನ್ನುವವರ ಮನೆಗೆ ಹಾನಿಯುಂಟಾಗಿದೆ.ನಿನ್ನೆ ರಾತ್ರಿ 8 ಗಂಟೆಗೆ ಬೀಸಿದ ಭಾರೀ ಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದ ಪರಿಣಾಮ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ.

ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ.ಅದೃಷ್ಟವಶಾತ್ ಬಾಬಿ ಮನೆಯಲ್ಲಿದ್ದ 9 ತಿಂಗಳ ಗಂಡು ಮಗು ಮತ್ತು 6  ವರ್ಷದ ಗಂಡು ಮಗು ಪಾರಾಗಿದೆ.

ಶಾರದಾ ಮನೆಯಲ್ಲಿದ್ದ 3 ವರ್ಷದ ಮಗು ಮತ್ತು 8 ವರ್ಷದ ಬಾಲಕಿ ಕೂಡ ಪಾರಾಗಿದ್ದಾರೆ.ಎರಡು ಮನೆ ಸೇರಿ ಅಂದಾಜು 7-8 ಲಕ್ಷ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.ಕಂದಾವರ ಗ್ರಾ.ಪಂ‌ ಉಪಾಧ್ಯಕ್ಷೆ ಶೋಭಾ, ಸದಸ್ಯ ಸೀನ ಪೂಜಾರಿ, ಗ್ರಾಮ ಲೆಕ್ಕಿಗ ಧೀರಜ್ ಇವತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -
spot_img

Latest News

error: Content is protected !!