Friday, June 27, 2025
Homeಕರಾವಳಿಮಂಗಳೂರು;  ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸೆಕ್ಸ್ ಗಾಗಿ ಆಹ್ವಾನಿಸಿದ್ದರು : ಮಂಗಳಮುಖಿಯಿಂದ ಗಂಭೀರ ಆರೋಪ

ಮಂಗಳೂರು;  ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸೆಕ್ಸ್ ಗಾಗಿ ಆಹ್ವಾನಿಸಿದ್ದರು : ಮಂಗಳಮುಖಿಯಿಂದ ಗಂಭೀರ ಆರೋಪ

spot_img
- Advertisement -
- Advertisement -

ಮಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸೆಕ್ಸ್ ಗಾಗಿ ಆಹ್ವಾನಿಸಿದ್ದರು ಎಂದು ಮಂಗಳಮುಖಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ , ಅರಿವು ಕಾರ್ಯಾಗಾರ ನಡೆದಿತ್ತು. ಆ ವೇಳೆ ಮಂಗಳಮುಖಿ ನಿಖಿಲಾ ಅವರು ನ್ಯಾಯಾಧೀಶರ ಎದುರೇ ತಮ್ಮನ್ನು ಪೊಲೀಸ್ ಅಧಿಕಾರಿ ಲೈಂಗಿಕಕ್ರಿಯೆಗೆ ಆಹ್ವಾನಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲಾ, ಮಂಗಳೂರಿನಲ್ಲಿ ರಾತ್ರಿ ವೇಳೆ ಸಿಂಗಲ್ ಸ್ಟಾರ್ ಪೊಲೀಸ್ ಅಧಿಕಾರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದರು. ಹಣ ಕೊಡುತ್ತೇನೆ ಬಾ ಎಂದು ಕರೆದರು. ಯೂನಿರ್ಫಾಮ್ ಹಾಕಿದ್ದೀರಾ ಅಲ್ವಾ ಅದನ್ನು ಕಳಚಿ ಬನ್ನಿ ಎಂದು ಹೇಳಿದ್ದೆ. ಇದೇ ವಿಚಾರವನ್ನು ನಾನು ಸಭೆಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿದ್ದೆ ಎಂದಿದ್ದಾರೆ,

ಇನ್ನು ನ್ಯಾಯಾಧೀಶರ ಮುಂದೆ ಹೇಳಿಕೆ ಬಳಿಕ ನಿನ್ನೆ ಪೊಲೀಸ್ ಅಧಿಕಾರಿಗಳು ನನ್ನನ್ನು ಕಮೀಷನರ್ ಕಚೇರಿಗೆ ಕರೆದಿದ್ದರು. ನನ್ನ ಹೇಳಿಕೆಗಳನ್ನು ಪಡೆದು ದೂರು ಕೊಡಿ ಎಂದು ಹೇಳಿದ್ದಾರೆ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಲಿಂಗತ್ವ ಅಲ್ಪಸಂಖ್ಯಾತೆ ನಿಖಿಲಾ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!