Monday, May 20, 2024
Homeಕರಾವಳಿಮೂಡಬಿದರೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವತಿಯಿಂದ ಸ್ವ ಸಹಾಯ ಸಂಘಗಳ ಸದಸ್ಯರಿಗೆ ತರಬೇತಿ

ಮೂಡಬಿದರೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವತಿಯಿಂದ ಸ್ವ ಸಹಾಯ ಸಂಘಗಳ ಸದಸ್ಯರಿಗೆ ತರಬೇತಿ

spot_img
- Advertisement -
- Advertisement -

ಮೂಡಬಿದರೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ( ನಬಾರ್ಡ್) ಭಾರತೀಯ ವಿಕಾಸ ಟ್ರಸ್ಟ್ (ರಿ).ಮಣಿಪಾಲ ಇದರ ಸಹಭಾಗಿತ್ವದಲ್ಲಿ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಮೂಡಬಿದಿರೆ ತಾಲೂಕಿನ ದರೆಗುಡ್ಡೆ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸಂಗೀತಾ ಎಸ್. ಕರ್ತಾ , ಸಹಾಯಕ ಮಹಾ ಪ್ರಬಂಧಕರು ನಬಾರ್ಡ್ (ಡಿ ಡಿ ಎಮ್) ವಹಿಸಿ ಮಹಿಳೆಯರು ಮತ್ತು ಸ್ವ ಸಹಾಯ ಸಂಘಗಳ ಗ್ರಾಮೀಣ ಅಭಿವೃದ್ಧಿಯ ಪಾತ್ರ, ನಬಾರ್ಡ್ ಯೋಜನೆಗಳ ಮಾಹಿತಿ ನೀಡಿದರು, ಸಾಲ ಪಡೆಯುವ ಸಂದರ್ಭದಲ್ಲಿ ನಮ್ಮ ಉದ್ದೇಶ ಆದಾಯ ಹೆಚ್ಚಿಸಲು ಪೂರಕವಾಗಿರುವ  ಜೀವನೋಪಾಯ ಆಗಿರಲಿ ಸರ್ಕಾರ ಮತ್ತು ಬ್ಯಾಂಕ್ ಗಳಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ದರೆಗುಡ್ಡೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತುಳಸಿ ಮೂಲ್ಯ ವಹಿಸಿ ಶುಭ ಹಾರೈಸಿದರು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜೀವನ್ ಕೊಲ್ಯ .ವ್ಯವಸ್ಥಾಪಕರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ . ಸ್ವಂತ ಉದ್ಯೋಗ ನಡೆಸಲು ಇರುವ ಅವಕಾಶಗಳು ಮತ್ತು ಪೂರಕ ತರಬೇತಿ ಸೌಲಭ್ಯಗಳ ಮಾಹಿತಿ ನೀಡಿದರು, ಶ್ರೀ ಲತೇಶ್.ಬಿ , ಸಮಾಲೋಚಕರು ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಮಂಗಳೂರು ಇವರು ಆರ್ಥಿಕ ಸೇರ್ಪಡೆ, ಉಳಿತಾಯ, ಬ್ಯಾಂಕ್ ಸೌಲಭ್ಯಗಳು, ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು, ಡಿಜಿಟಲ್ ವ್ಯವಹಾರ , ಸ್ವಂತ ಉದ್ಯೋಗ ನಡೆಸಲು ಇರುವ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಜೊಬಿನ್ ಲೀಡ್ ಬ್ಯಾಂಕ್ ಮಂಗಳೂರು , ಶ್ರೀಮತಿ ಶುಭಾ, ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭಾಗವಹಿಸಿದ್ದರು. ಶ್ರೀಮತಿ ಲವೀನಾ ,ಸಂಜೀವಿನಿ ಎಲ್ ಸಿ ಆರ್ ಪಿ   ಸ್ವಾಗತಿಸಿದರು, ಶ್ರೀಮತಿ  ಸುನೀತಾ  ಸಂಜೀವಿನಿ ಎಲ್ ಸಿ ಆರ್ ಪಿ    ಧನ್ಯವಾದಗಳನ್ನು ಸಮರ್ಪಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಮಾನಸ ,ಎಮ್ ಬಿ ಕೆ  ಸಂಜೀವಿನಿ ದರೆಗುಡ್ಡೆ ನಿರ್ವಹಿಸಿದ

- Advertisement -
spot_img

Latest News

error: Content is protected !!