Thursday, June 4, 2026
Homeಕರಾವಳಿಬೆಳ್ತಂಗಡಿ; ಸರ್ಕಾರದ ಯೋಜನೆಯ ಕುರಿತಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತರಬೇತಿ

ಬೆಳ್ತಂಗಡಿ; ಸರ್ಕಾರದ ಯೋಜನೆಯ ಕುರಿತಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತರಬೇತಿ

- Advertisement -
- Advertisement -

ಬೆಳ್ತಂಗಡಿ; ಕಾಂಗ್ರೆಸ್ ಪಕ್ಷದ ವತಿಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗಾಗಿ ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಇಂದಿರಾ ಸೇವಾ ಸೆಂಟರ್ ಗಳನ್ನು ತೆರೆದು ಫಲಾನುಭವಿಗಳಿಗೆ ಅರ್ಜಿ ನೋಂದಣಿ ಮಾಡಿ ಕೊಡುವ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮ ನಾರಾಯಣ ಗುರು ಸಭಾ ಭಾವನದಲ್ಲಿ ನಡೆಯಿತು. ತರಬೇತಿಯನ್ನು ಜಿಲ್ಲಾ ತರಬೇತುದಾರು, ಜಿಲ್ಲಾ ಕಾರ್ಮಿಕ ಕಾಂಗ್ರೇಸ್ ಘಟಕದ ಅಧ್ಯಕ್ಷರಾದ ಲಾರೆನ್ಸ್ ಡಿ ಸೋಜಾ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಉಭಯ ಬ್ಲಾಕ್ ಕಾಂಗ್ರೇಸ್ ಘಟಕದ ಅಧ್ಯಕ್ಷರುಗಳಾದ  ಶೈಲೇಶ್ ಕುಮಾರ್, ರಂಜನ್ ಗೌಡ, ಮುಖಂಡರುಗಳಾದ ಸುಭಾಶ್ಚಂದ್ರ ರೈ ಕುಳಾಲು,ವೃಷಭ ಆರಿಗ, ಕೇಶವ ಬೆಳಾಲು, ಅಬ್ದುಲ್ ರಹಿಮಾನ್, ಅಭಿನಂದನ್ ಹರೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!