- Advertisement -
![]()
- Advertisement -
ಪುತ್ತೂರು: ರೈಲು ಡಿಕ್ಕಿ ಹೊಡೆದು ಕಾಡುಕೋಣ ಮತ್ತು ಅದರ ಮರಿ ಸಾವನ್ನಪ್ಪಿದ ಘಟನೆ ನರಿಮೊಗರು ಗ್ರಾಮದ ಗಡಿಪ್ಪಿಲ ಎಂಬಲ್ಲಿ ಮುಂಜಾನೆ ನಡೆದಿದೆ.
ರಾತ್ರಿ ವೇಳೆ ತೋಟಗಳಿಗೆ ಮೇವು ಅರಸಿ ಬಂದಿದ್ದ ಕಾಡುಕೋಣಗಳು ಬೆಳಿಗ್ಗೆ ಮತ್ತೆ ಕಾಡು ಸೇರಲು ರೈಲ್ವೆ ಹಳಿಯಲ್ಲಿ ಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಕಾಡುಕೋಣ ಮತ್ತು ಅದರ ಮರಿ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಎಸಿಎಫ್ ಕಾರ್ಯಪ್ಪ , ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ , ನರಿಮೊಗರು ಉಪ ವಲಯಾರಣ್ಯಾಧಿಕಾರಿ ಕುಮಾರಸ್ವಾಮಿ , ಪುತ್ತೂರು ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ , ಅರಣ್ಯ ರಕ್ಷಕರಾದ ಸತ್ಯನ್ ಡಿ.ಜಿ ಹಾಗೂ ದೀಪಕ್ ಭೇಟಿ ನೀಡಿ ಸಾವನ್ನಪ್ಪಿದ ಕಾಡುಕೋಣಗಳ ಮರಣೋತ್ತರ ಮಹಜರು ನಡೆಸಿದ್ದಾರೆ.
- Advertisement -


