- Advertisement -
- Advertisement -
ನವದೆಹಲಿ: ಪ್ರಸ್ತುತ ಇರುವ 10 ಸಂಖ್ಯೆಯ ಮೊಬೈಲ್ ನಂಬರನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶಿಫಾರಸ್ಸು ಮಾಡಿದೆ.
ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಕರೆ ಮಾಡುವಾಗ 0 ಸೇರಿಸಬೇಕಿದೆ. ಈಗ ಇರುವ ಮೊಬೈಲ್ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಮೊದಲು ಸೊನ್ನೆಯನ್ನು ಸೇರಿಸಿ ಡಯಲ್ ಮಾಡಬೇಕಿದೆ ಎಂದು ಹೇಳಲಾಗಿದೆ.
ಮೊಬೈಲ್ ನಿಂದ ಮೊಬೈಲ್’ಗೆ ಅಥವಾ ಮೊಬೈಲ್ ನಿಂದ ಸ್ಥಿರ ದೂರವಾಣಿಗೆ ಕರೆ ಮಾಡುವಾಗ 0 ಯನ್ನು ಡಯಲ್ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಹಾಲಿ ಲಭ್ಯವಿರುವ ಮೊಬೈಲ್ ಹಾಗೂ ಸ್ಥಿರ ದೂರವಾಣಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟ್ರಾಯ್ ಈ ಶಿಫಾರಸು ಮಾಡಿದೆ.
ಹಾಲಿ ಕಚೇರಿಯಲ್ಲಿ ನೆಟ್ ವರ್ಕ್ ನಲ್ಲಿರುವ ಲ್ಯಾಂಡ್ ಲೈನ್ ಗಳ ಮೂಲಕ ಮೊಬೈಲ್ ಗೆ ಕರೆ ಮಾಡಲು 0 ಡಯಲ್ ಮಾಡುವ ವ್ಯವಸ್ಥೆ ಇದೆ.
- Advertisement -