ಮಂಗಳೂರು ನಗರದಲ್ಲಿ ಸುಗಮ ಸಂಚಾರ ಅನುವು ಮಾಡಿಕೊಡಲು ಹಾಗೂ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆಗೊಳಿಸಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಇದರ ಬಗ್ಗೆ ಕಳೆದ ಮೂರು ತಿಂಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿ No parking, Wrong parking, Double parking, Footpath parking ಮಾಡಿದ ವಾಹನ ಮಾಲಕ/ಚಾಲಕರ ವಿರುದ್ಧ ದಾಖಲಿಸಿ ರೂ. 23,21,200/- ದಂಡವನ್ನು ವಿಧಿಸಲಾಗಿದೆ. ಮುಂದುವರೆದು ಕೆಲವು ವಾಣಿಜ್ಯ ಸಂಕೀರ್ಣ ಮತ್ತು ದೊಡ್ಡ ವ್ಯಾಪಾರ ಮಳಿಗೆಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ, ಅವರುಗಳಿಗೆ ಸಭೆ ಮೂಲಕ ತಿಳುವಳಿಕೆ ನೀಡಿದ್ದಲ್ಲದೇ, ಸೂಕ್ತ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಿ ನೋಟಿಸು ಸಹ ನೀಡಿರುತ್ತೆ. ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ, Black spotಗಳ (ಹೆಚ್ಚು ಅಪಘಾತಗಳಾಗುವ) ಬಳಿ ಅತೀ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ್ದ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ ರೂ.5,62,000/- ದಂಡವನ್ನು ವಿಧಿಸಿದ್ದಾರೆ.
ಅದೇ ರೀತಿ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ನ್ನು ಉಪಯೋಗಿಸಿರುವ ವಾಹನಗಳ ವಿರುದ್ಧ್ದ 5865 ಪ್ರಕರಣಗಳನ್ನು ದಾಖಲಿಸಿ ರೂ. 24,85,900/- ದಂಡವನ್ನು ಹಾಕಲಾಗಿರುತ್ತದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸದ್ರಿ ವಾಹನಗಳ ಟಿಂಟೆಡ್ ಸ್ಟಿಕರ್ಸ್/ Black film ನ್ನು ತೆಗೆಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಮಾಹಿತಿ ನೀಡಿದ್ದಾರೆ.


