Wednesday, June 24, 2026
Homeಅಪರಾಧಜ.8 ಯಶ್ ಜನ್ಮದಿನದಂದು ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆ..!

ಜ.8 ಯಶ್ ಜನ್ಮದಿನದಂದು ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆ..!

- Advertisement -
- Advertisement -

ಬೆಂಗಳೂರು: ಕನ್ನಡದ ಬಹು ಬೇಡಿಕೆಯ ನಟ ಯಶ್ ಜನ್ಮದಿನದಂದು(ಜ.08) ಟಾಕ್ಸಿಕ್ ಸಿನಿಮಾದ ಮೊದಲ ಅಪ್ಡೇಟ್ ಜನವರಿ 8ರಂದು ಯಶ್ ಜನ್ಮದಿನದ ಪ್ರಯುಕ್ತ ಹೊರಬರಲಿದೆ.

ಆದರೆ ಚಿತ್ರತಂಡವು ಟೀಸರ್ ರೀತಿಯ ಮೊದಲ ನೋಟವನ್ನು ಬಿಡುಗಡೆ ಮಾಡುತ್ತಿದೆಯೋ ಅಥವಾ ಚಿತ್ರದ ಟೀಸರ್‌ನೇ ಬಿಡುಗಡೆಮಾಡುತ್ತದೋ ಎಂದು ಕಾದು ನೋಡಬೇಕಿದೆ.  

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕ ನಟ ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟಾಕ್ಸಿಕ್ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡು Unleashing him… ಅವನನ್ನು ಹೊರಗೆ ಬಿಡಿ ಎಂಬ ಒಕ್ಕಣಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.

‘ಟಾಕ್ಸಿಕ್‌’ ಯಶ್‌ ನಟನೆಯ 19ನೇ ಸಿನಿಮಾವಾಗಿದೆ. 2023ರ ಡಿಸೆಂಬರ್‌ 8ರಂದು ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ಆಗಸ್ಟ್‌ 8ರಂದು ಆರಂಭವಾಗಿತ್ತು. ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಮುಂಬೈಗೆ ಹೆಜ್ಜೆ ಇಟ್ಟಿದೆ.

- Advertisement -

Latest News

error: Content is protected !!