Wednesday, June 24, 2026
Homeಕರಾವಳಿಉಡುಪಿಉಡುಪಿ: ಸಿಸಿಟಿವಿ ಲೈವ್ ಮಾನಿಟರಿಂಗ್ ನಲ್ಲಿ ಗೋ ಕಳ್ಳತನ ಯತ್ನ ಪತ್ತೆ, ಕ್ಷಣದಲ್ಲಿ ಸ್ಥಳಕ್ಕೆ ತಲುಪಿದ...

ಉಡುಪಿ: ಸಿಸಿಟಿವಿ ಲೈವ್ ಮಾನಿಟರಿಂಗ್ ನಲ್ಲಿ ಗೋ ಕಳ್ಳತನ ಯತ್ನ ಪತ್ತೆ, ಕ್ಷಣದಲ್ಲಿ ಸ್ಥಳಕ್ಕೆ ತಲುಪಿದ ಪೋಲೀಸರು; ಕಳ್ಳರು ಎಸ್ಕೇಪ್!

- Advertisement -
- Advertisement -

ಅಕ್ರಮ ಗೋ ಸಾಗಾಟದ ಸಂಚು ವಿಫಲಗೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.ಕುಂದಾಪುರ ತಾಲೂಕಿನ ಬೀಜಾಡಿ ಜಂಕ್ಷನ್ ನಲ್ಲಿ ಬೆಳಗಿನ ಜಾವ ಮೂರು ಗಂಟೆಗೆ ಗೋವು ಕಳ್ಳತನಕ್ಕೆ ದುಷ್ಕರ್ಮಿಗಳು ಪ್ರಯತ್ನ ನಡೆಸಿದ್ದಾರೆ.

ರಸ್ತೆ ಬದಿಯಿಂದ ಜಾನುವಾರುಗಳನ್ನು ಕಾರಿಗೆ ತುಂಬಿಸಲು ಪ್ರಯತ್ನ ನಡೆಸಿದ್ದು ಅಂಕದ ಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿಟಿವಿ ಲೈವ್ ವೀಕ್ಷಣೆಯಲ್ಲಿ ಪತ್ತೆಯಾಗಿದೆ.‌ತಕ್ಷಣ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ ಕಾರಣ ಜಾನುವಾರುಗಳನ್ನು ಸ್ಥಳದಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸಕಾಲದಲ್ಲಿ ಸೆಕ್ಯೂರಿಟಿ ಸಂಸ್ಥೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ‌ ನೀಡಿದ ಕಾರಣ ಜಾನುವಾರು ಕಳ್ಳತನ ಯತ್ನ ವಿಫಲಗೊಂಡಿದೆ.

- Advertisement -

Latest News

error: Content is protected !!