ಮಂಗಳೂರು: ಅನಾವಶ್ಯಕವಾಗಿ ವಾಹನಗಳನ್ನು ರಸ್ತೆಗಿಳಿಸಿದವರ ವಾಹನವನ್ನು ಪೊಲೀಸರು ಪ್ರತಿನಿತ್ಯ ವಾಹನ ಮುಟ್ಟುಗೋಲು ಹಾಕುತ್ತಿದ್ದರೂ ವಿನಾಕಾರಣ ವಾಹನಗಳನ್ನು ರಸ್ತೆಗಿಳಿಸಿದವರ ಸಂಖ್ಯೆ ಏನೂ ಕಡಿಮೆಯಾಗಿರಲಿಲ್ಲ.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಏಪ್ರಿಲ್ ತಿಂಗಳೊಂದರಲ್ಲೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಬರೋಬ್ಬರಿ 3,753 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಆದರೆ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೇಲೆ ಔದಾರ್ಯ ತೋರಿದ ಪೊಲೀಸರು ಒಂದೇ ದಿನದ ಮಟ್ಟಿಗೆ ವಶಪಡಿಸಿಕೊಂಡು ಬಳಿಕ ಬಳಿಕ ನೋಟಿಸು ನೀಡಿ ವಾಹನ ಹಿಂತಿರುಗಿಸಿದ್ದಾರೆ.
ಸದ್ಯ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಇನ್ನು ನಿರ್ಧಾರ ಆಗಿಲ್ಲ. ಮಂಗಳೂರು ದಂಡ ವಿಧಿಸುವ ಕ್ರಮಕ್ಕೆ ಮುಂದಾಗದ ಹಿನ್ನಲೆ ವಾಹನ ಸವಾರರು ಕೊಂಚ ರಿಲೀಫ್ ಆದಂತೆ ಕಂಡರೂ, ಮುಟ್ಟುಗೋಲು ಹಾಕಿದ ವಾಹನದ ಬಗ್ಗೆ ಡಿಟೇಲ್ಸ್ ಆಟೊಮೇಶನ್ ಸೆಂಟರ್‌ಗೆ ಅಪ್‌ಲೋಡ್ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ದಂಡ ಪಾವತಿಸುವಂತೆ ನೋಟಿಸ್ ಬಂದರೂ ವಾಹನ ಸವಾರರು ಅಚ್ಚರಿ ಪಡಬೇಕಾಗಿಲ್ಲ.
ಒಂದು ತಿಂಗಳ ಪೈಕಿ ಏ. 8ರಂದು ಅತಿ ಹೆಚ್ಚು ಅಂದರೆ 317 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿತ್ತು.