
ಮೇಷ ರಾಶಿ
ದಿನವಿಡೀ ಇತರರಿಗೆ ಹಿಂಸೆ ನೀಡದೆ ಕೆಲಸ ಮಾಡಲಿದ್ದೀರಿ. ಆದಷ್ಟು ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಸುಖನಿದ್ರೆ ನಿಮ್ಮ ಪಾಲಿಗಿದೆ. ಕುಟುಂಬದಲ್ಲಿ ನಂಬಿಕೆ ವಿಶ್ವಾಸವನ್ನು ಇಂದಿಗೂ ಕಳೆದುಕೊಳ್ಳಬೇಡಿ.
ವೃಷಭ ರಾಶಿ
ಹಲವು ಮೂಲದಿಂದ ಹಣಕಾಸು ಬರುವುದಾದರೂ ಖರ್ಚು ಅಧಿಕ. ಸ್ನೇಹಿತರಿಂದ ಸಹಕಾರ ದೊರಕುವುದೆಂದು ನಿಮ್ಮ ಭಾರ ಅವರ ಮೇಲೆ ಹಾಕಿ ಕೆಲಸಗಳ್ಳತನ ಬೇಡ. ಇಂದು ಶುಭ ದಿನ.
ಮಿಥುನ ರಾಶಿ
ನಿಮ್ಮ ಕಾರ್ಯಗಳು ಕೈ ಮೀರಿ ಹೋಗದಿರಲಿ. ದುಷ್ಟರಿಂದ ದೂರವಿರಲು ಯತ್ನಿಸಿದರೂ ಶತ್ರುಗಳ ಕಾಟ ವಿರುತ್ತದೆ. ಜೀವನದಲ್ಲಿ ಸುಖ ಧನಲಾಭವಾಗುವ ನಿರೀಕ್ಷೆಇರುತ್ತದೆ. ಆತುರಪಟ್ಟು ಕೆಲಸ ಹಾಲು ಮಾಡುವುದು ಬೇಡ.
ಕಟಕ ರಾಶಿ
ಆರೋಗ್ಯದಲ್ಲಿನ ಏರಿಳಿತವನ್ನು ಕೊಂಚ ಯೋಚಿಸಿ. ನಿಮಗೆ ವಿಶ್ರಾಂತಿ ಅವಶ್ಯಕತೆ ಇದೆ. ಮನೋಲ್ಲಾಸ ಉಂಟಾಗಲಿರುವ ದಿನ.ಬೇರೆ ಬೇರೆ ಮೂಲದಿಂದ ಈ ದಿನ ಉತ್ತಮ ಆದಾಯ ಬರಲಿದೆ.
ಸಿಂಹ ರಾಶಿ
ಅವಶ್ಯಕ ಸಮಯದಲ್ಲಿ ಸಾಲದ ನೆರವು. ಆರೋಗ್ಯ ಸ್ಥಿತಿ ಉತ್ತಮವಾಗಲಿದೆ. ಜಾಗರೂಕತೆ ಇಲ್ಲವಾದರೆ ಧನಹಾನಿ ಆಗಲಿದೆ. ಇಂದು ಕುಟುಂಬದಲ್ಲಿ ಸಂತೋಷ ತುಂಬುವ ದಿನ ಒಳ್ಳೆಯ ಸುದ್ದಿ ನಿಮ್ಮನ್ನು ತಲುಪಲಿದೆ.
ಕನ್ಯಾ ರಾಶಿ: ಮಾತಿನ ಮೇಲೆ ಹಿಡಿತವಿರಲಿ. ಆರ್ಥಿಕವಾಗಿ ಸೋಲಾಗಬಹುದು ಎಚ್ಚರ. ಯಾವುದೇ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಬೇಡ. ಕೆಲಸಕ್ಕೆ ತಕ್ಕ ಫಲವನ್ನು ಪಡೆದು ಸುಖ ದೊರಕಲಿದೆ.
ತುಲಾ ರಾಶಿ
ಕಣ್ಣು ನೋವು ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆ ಅಗತ್ಯ. ಆತಂಕ ಮತ್ತು ಚಿಂತೆ ಹೆಚ್ಚಲಿದೆ. ದಿನ ನಿಮಗೆ ಅನುಕೂಲಕರವಾಗಿದೆ ಕುಟುಂಬದವರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.
ವೃಶ್ಚಿಕ ರಾಶಿ
ಇಂದ ಮನಸ್ಸು ಗೊಂದಲಕ್ಕೊಳಗಾಗಿದ್ದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ವಾಗುವುದಿಲ್ಲ. ಮಧ್ಯಮ ಫಲದಾಯಕ ದಿನ. ಖುಷಿಯಾಗಿ ದಿನ ಸಾಗಲಿದ್ದು ನಿಮ್ಮ ಕೆಲಸವನ್ನು ಇತರರು ಮೆಚ್ಚಿಕೊಳ್ಳುತ್ತಾರೆ.
ಧನುಸ್ಸು ರಾಶಿ
ನಿಮ್ಮ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡರೆ ನಿಮಗೇ ಒಳ್ಳೆಯದು. ಸ್ನೇಹಿತರು ನಿಮ್ಮ ಜೀವನದಲ್ಲಿ ಆನಂದ ತರುವರು. ಲಕ್ಷ್ಮಿ ಆರಾಧನೆ ಬಹಳ ಅಗತ್ಯ. ದೈವ ನಂಬಿಕೆ ಕಳೆದುಕೊಳ್ಳಬೇಡಿ.
ಮಕರ ರಾಶಿ
ಸಾಲ ಮಾಡುವಿರಿ ಮುನ್ನಾ ದಿನಗಳಲ್ಲಿ ಅದು ಸಮಸ್ಯೆ ಯಾಗಬಹುದು. ಚಿಕ್ಕ ಮಕ್ಕಳ ಆರೋಗ್ಯದ ಕಡೆ ಎಚ್ಚರ ಅಗತ್ಯ. ಕುಟುಂಬ ಸಮ್ಮಿಲನದಿಂದ ಸಂಭ್ರಮ ಹೆಚ್ಚಲಿದೆ.
ಕುಂಭ ರಾಶಿ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಮತ್ತು ಜಾಗರೂಕತೆ ಅಗತ್ಯ. ಎಲ್ಲ ವಿಷಯಗಳ ಕುರಿತು ಅಧಿಕ ಚಿಂತೆ ಬೇಡ ಮಕ್ಕಳ ಆರೋಗ್ಯದಲ್ಲಿ ವೈದ್ಯರನ್ನು ಕಾಣಬೇಕಾದ ಪರಿಸ್ಥಿತಿ ಬರಬಹುದು.
ಮೀನ ರಾಶಿ
ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಭಯದಿಂದ ಮುಕ್ತರಾಗಿ ಪಾರ್ವತೀ ಸ್ತುತಿ ಮಾಡಿ. ಮಕ್ಕಳ ಮದುವೆಗೆ ಅತಿ ತಿರುಗಾಟವಾಗಲಿದೆ. ಕುಟುಂಬ ಕಲಹ ಸಾಧ್ಯತೆ.


