Wednesday, May 8, 2024
Homeಕರಾವಳಿಪಿಎಸ್ಐ ಆಗುವ ಆಸೆ: ಗರ್ಭಿಣಿ ಅನ್ನೊದನ್ನು ಮರೆತು 400 ಮೀಟರ್ ಓಡಿದ ಗಟ್ಟಿಗಿತ್ತಿ ಮಹಿಳೆ

ಪಿಎಸ್ಐ ಆಗುವ ಆಸೆ: ಗರ್ಭಿಣಿ ಅನ್ನೊದನ್ನು ಮರೆತು 400 ಮೀಟರ್ ಓಡಿದ ಗಟ್ಟಿಗಿತ್ತಿ ಮಹಿಳೆ

spot_img
- Advertisement -
- Advertisement -

ಬೀದರ್: ತಾನು ಗರ್ಭಿಣಿ ಎನ್ನುವುದನ್ನು ಮರೆತು ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ ಆಗಬೇಕು ಎನ್ನುವ ಛಲ ಹೊಂದಿರುವ ಮಹಿಳೆಯೊಬ್ಬಳು 400 ಮೀಟರ್ ಓಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಆ ಮಹಿಳೆಯ ಹೆಸರು ಅಶ್ವಿನಿ ಸಂತೋಷ್ ಕೊರೆ. ಇಂಜಿನಿಯರಿಂಗ್ ಪದವಿ ಪೂರೈಸಿರುವ ಅಶ್ವಿನಿ ಅವರಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕು ಅನ್ನುವ ಕನಸಿತ್ತು. ಈಗಾಗಲೇ ಎರಡು ಬಾರಿ ಫಿಸಿಕಲ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದ ಅಶ್ವಿನಿ, ಲಿಖಿತ ಪರೀಕ್ಷೆಯನ್ನು ಮುಗಿಸಿಲ್ಲ. ಎರಡು ಬಾರಿ ಹಿನ್ನೆಡೆ ಅನುಭವಿಸಿದರೂ ಛಲ ಬಿಡದೆ, ಮೂರನೇ ಪ್ರಯತ್ನಕ್ಕೆ ಮುಂದಾಗಿದ್ದರು.

ಮೂರನೇ ಪ್ರಯತ್ನದ ವೇಳೆಗೆ ಅಶ್ವಿನಿ ಗರ್ಭಿಣಿಯಾಗಿದ್ದು, ಫಿಸಿಕಲ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವುದು ಬೇಡವೆಂದು ವೈದ್ಯರು ಸಲಹೆ ನೀಡಿದ್ದರು. ಆದರೂ ಅಶ್ವಿನಿ ತನ್ನ ಜೀವ ಮಾತ್ರವಲ್ಲದೇ, ಕಂದನ ಜೀವವನ್ನೂ ಪಣಕ್ಕೆ ಇಟ್ಟು ಹೋರಾಡಿದ್ದು ಇದೀಗ ಭಾರೀ ಸುದ್ದಿಯಾಗಿದೆ.

ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅಶ್ವಿನಿ, ಪಿಎಸ್ ಐ ಆಗಬೇಕು ಅನ್ನೋದು ನನ್ನ ಕನಸು.ಆ ಕನಸನ್ನು ನನಸು ಮಾಡಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದೇನೆ.ಈ ಬಾರಿ ಗರ್ಭಿಣಿಯಾದರೂ ಕೂಡಾ 400 ಮೀಟರ್ ಓಟವನ್ನು ಓಡಿ, ದೈಹಿಕ ಪರೀಕ್ಷೆ ಪಾಸಾಗಿದ್ದೇನೆ. ನಾನು ಈ ಹಿಂದೆ ಎರಡು ಬಾರಿ ದೈಹಿಕ ಪರೀಕ್ಷೆ ಪಾಸಾಗಿದ್ದೆ. ಹೀಗಾಗಿ ಗರ್ಭಿಣಿಯಾಗಿದ್ದರಿಂದ ದೈಹಿಕ ಪರೀಕ್ಷೆಯಲ್ಲಿ 400 ಮೀಟರ್ ಓಟಕ್ಕೆ ವಿನಾಯತಿ ನೀಡುವಂತೆ ಕೇಳಿದ್ದೆ. ಆದ್ರೆ ನಿಯಮಗಳ ಪ್ರಕಾರ ಕಡ್ಡಾಯವಾಗಿ 400 ಮೀಟರ್ ಓಟದಲ್ಲಿ ಪಾಸಾಗಲೇ ಬೇಕಾಗಿದ್ದರಿಂದ ಅನಿವಾರ್ಯವಾಗಿ ಓಟವನ್ನು ಓಡಬೇಕಾಯಿತು. ಸದ್ಯ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!