Friday, June 5, 2026
Homeಕರಾವಳಿಸುಳ್ಯ: ಪರವಾನಗಿ ಇಲ್ಲದೇ ಮರ ಸಾಗಾಟ:  ನಾಲ್ವರು ಆರೋಪಿಗಳ ಬಂಧನ

ಸುಳ್ಯ: ಪರವಾನಗಿ ಇಲ್ಲದೇ ಮರ ಸಾಗಾಟ:  ನಾಲ್ವರು ಆರೋಪಿಗಳ ಬಂಧನ

- Advertisement -
- Advertisement -

ಸುಳ್ಯ: ಪರವಾನಗಿ ಇಲ್ಲದೇ ಹಲಸು ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದವರನ್ನು ಬಂಧಿಸಿರುವ ಘಟನೆ  ಅಜ್ಜಾವರ ಗ್ರಾಮದಲ್ಲಿ  ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಹಿತ, ಮರ ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಮ್ಮದ್ ಶಫೀಕ್ ಅಡ್ಕಾರ್, ಸುಂದರ್ ಅಡ್ಕಾರ್, ಫೈಝಲ್ ಅಡ್ಕಾರ್ ಬಂಧಿತರು.  ಬಂಧಿತರು ನೀಡಿದ ಹೇಳಿಕೆಯಂತೆ ಮರ ಸಾಗಾಟದ ಪ್ರಮುಖ ಆರೋಪಿಯೆಂದು ಅಬ್ದುಲ್ ಮಜೀದ್ ನಡುವಡ್ಕರೆಂದು ತಿಳಿದು ಅವರ ಮೇಲೂ ಕೇಸು ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಸುಳ್ಯ ಎ.ಸಿ.ಎಫ್. ಪ್ರವೀಣ್ ಕುಮಾರ್ ಶೆಟ್ಟಿ, ರೇಂಜರ್ ಗಿರೀಶ್ ರ ಮಾರ್ಗದರ್ಶನದ ಮೇರೆಗೆ ಫಾರೆಸ್ಟರ್ ಯಶೋಧರ, ಸಿಬ್ಬಂದಿ ದೇವಿಪ್ರಸಾದ್, ಲಿಂಗಪ್ಪ, ಗಂಗಾಧರ್, ಪುರುಷೋತ್ತಮ್ ಕಾರ್ಯಾಚರಣೆಯಲ್ಲಿದ್ದರೆಂದು ತಿಳಿದು ಬಂದಿದೆ.

- Advertisement -

Latest News

error: Content is protected !!