Wednesday, June 26, 2024
Homeತಾಜಾ ಸುದ್ದಿಪವನ್‍ ಕಲ್ಯಾಣ್ ಹುಟ್ಟುಹಬ್ಬದ ಪೋಸ್ಟರ್ ಹಾಕಲು ಹೋದ 3 ಅಭಿಮಾನಿಗಳು ಸಾವು..!

ಪವನ್‍ ಕಲ್ಯಾಣ್ ಹುಟ್ಟುಹಬ್ಬದ ಪೋಸ್ಟರ್ ಹಾಕಲು ಹೋದ 3 ಅಭಿಮಾನಿಗಳು ಸಾವು..!

spot_img
- Advertisement -
- Advertisement -

ಚಿತ್ತೂರು- ಪವರ್ ಸ್ಟಾರ್ ಎನಿಸಿಕೊಂಡಿರುವ ತೆಲುಗು ಚಿತ್ರರಂಗದ ನಟ, ರಾಜಕಾರಣಿ ಪವನ್‍ಕಲ್ಯಾಣ್ ಹುಟ್ಟುಹಬ್ಬದ ಅಂಗವಾಗಿ ಪೋಸ್ಟರ್ ಹಾಕುತ್ತಿದ್ದ ಮೂವರು ಯುವಕರು ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ತಡರಾತ್ರಿ ನಡೆದಿದೆ.

ರಾಜೇಂದ್ರ ಪ್ರಸಾದ್ (31), ಸೋಮಶೇಖರ್ (29), ಅರುಣಾಚಲಂ (20) ಮೃತರು. ಪವನ್, ಹರಿ, ಸಂತೋಷ್, ಸುಬ್ರಹ್ಮಣ್ಯ ಗಾಯಾಳುಗಳು. ನಾಲ್ವರು ಗಾಯಾಳುಗಳನ್ನು ಕುಪ್ಪಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.

ಬ್ಯಾನರ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದ ಹಿನ್ನೆಲೆ ಈ ಅವಘಢ ಸಂಭವಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಾಂತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾವೈರಸ್ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಸರಳವಾಗಿರಲಿ ಎಂದು ಎಲ್ಲಾ ಸ್ಟಾರ್ ನಟ, ನಟಿಯರು ಮನವಿ ಮಾಡಿಕೊಂಡಿದ್ದಾರೆ. ದೊಡ್ಡ ಕಟೌಟ್, ಪೋಸ್ಟರ್ ಹಾಕುವುದಕ್ಕೆ ನಿರ್ಬಂಧ ಹೇರಲಾಗಿದೆ.

ಅಭಿಮಾನಿಗಳ ನಿಧನಕ್ಕೆ ಪವನ್‌ ಕಲ್ಯಾಣ್‌ ಕಂಬನಿ ಮಿಡಿದಿದ್ದಾರೆ. ಅವರ ಜನಸೇನಾ ಪಾರ್ಟಿಯ ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಸಂತಾಪ ಸೂಚಿಸಲಾಗಿದೆ. ಅಲ್ಲದೆ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಪ್ರಕಟಿಸಿದ್ದಾರೆ.

- Advertisement -
spot_img

Latest News

error: Content is protected !!