Wednesday, June 3, 2026
Homeಕರಾವಳಿಉಡುಪಿಉಡುಪಿ: ಇದಕ್ಕಿದ್ದಂತೆ ಹಾಸ್ಟೆಲ್ ನಿಂದ ನಾಪತ್ತೆಯಾದ ಮೂವರು ಬಾಲಕಿಯರು

ಉಡುಪಿ: ಇದಕ್ಕಿದ್ದಂತೆ ಹಾಸ್ಟೆಲ್ ನಿಂದ ನಾಪತ್ತೆಯಾದ ಮೂವರು ಬಾಲಕಿಯರು

- Advertisement -
- Advertisement -

ಉಡುಪಿ: ಇದಕ್ಕಿದ್ದಂತೆ ಹಾಸ್ಟೆಲ್ ನಿಂದ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರ ಹಿಂದುಳಿದವರ್ಗ ಹಾಸ್ಟೆಲ್‌ ನಲ್ಲಿ ನಡೆದಿದೆ.

 ಹಾಸ್ಟೆಲ್‌ನಲ್ಲಿದ್ದ 6, 7, 8ನೇ ತರಗತಿಯ ವಿದ್ಯಾರ್ಥಿನಿಯರು ಸಂಜೆ 5 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಅದರಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಳಬಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನಾಪತ್ತೆಯಾಗಿದ್ದ ಮಕ್ಕಳನ್ನು ರಾತ್ರಿ 8 ಗಂಟೆ ಸುಮಾರಿಗೆ ಮಂಗಳೂರು ಬಿ.ಸಿ.ರೋಡ್ ಬಳಿ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ.

ಉತ್ತರ ಕರ್ನಾಟಕ ಮೂಲದ ಈ ಮೂವರು ಬೆಂಗಳೂರು ಕಡೆ ಹೋಗುವ ಬಸ್ ಹತ್ತಿದ್ದರೆನ್ನಲಾಗಿದೆ. ಇದೀಗ ಮಕ್ಕಳನ್ನು ವಾಪಾಸ್ಸು ಬ್ರಹ್ಮಾವರಕ್ಕೆ ಕರೆದುಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಈ ಮೂವರು ಬ್ರಹ್ಮಾವರ ಬೋರ್ಡ್ ಹೈಸ್ಕೂಲ್‌ನ ವಿದ್ಯಾರ್ಥಿಗಳಾಗಿದ್ದಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!