Saturday, August 29, 2026
Homeಕರಾವಳಿಮಂಗಳೂರುವಿಟ್ಲ; ಭಾರೀ ಮಳೆಗೆ ಕುಸಿದು ಬಿದ್ದ ಕೋಳಿ ಫಾರ್ಮ್ ನ ಛಾವಣಿ; ಸಾವಿರಾರು ಕೋಳಿಗಳ ಮಾರಣ...

ವಿಟ್ಲ; ಭಾರೀ ಮಳೆಗೆ ಕುಸಿದು ಬಿದ್ದ ಕೋಳಿ ಫಾರ್ಮ್ ನ ಛಾವಣಿ; ಸಾವಿರಾರು ಕೋಳಿಗಳ ಮಾರಣ ಹೋಮ

- Advertisement -
- Advertisement -

ವಿಟ್ಲ; ಭಾರೀ ಮಳೆಗೆ  ಕುಸಿದು ಬಿದ್ದ ಕೋಳಿ ಫಾರ್ಮ್ ನ ಛಾವಣಿ ಕುಸಿದು ಬಿದ್ದು ಸಾವಿರಾರು ಕೋಳಿಗಳ ಮಾರಣ ಹೋಮವಾಗಿರುವ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ಜುಲೈ 18 ರಂದು ರಾತ್ರಿ ನಡೆದಿದೆ.

ಸೇಕೆಹಿತ್ಲು ರಾಘವ ಎಂಬವರ ಮಾಲೀಕತ್ವದ ಫಾರ್ಮ್ ನಲ್ಲಿ ಸುಮಾರು 2200 ಕೋಳಿಗಳು ಸಾಕುತ್ತಿದ್ದರು.ಕೋಳಿಗಳು ಬೇಕಾದ ತೂಕ ಬಂದಿದ್ದರಿಂದ 700 ಕೋಳಿಗಳನ್ನು ಸೇಲ್ ಮಾಡಲಾಗಿತ್ತು. ಬಾಕಿ ಉಳಿದ 1500 ಕೋಳಿಗಳು ಫಾರ್ಮ್ ನಲ್ಲಿದ್ದವು.ನಿನ್ನೆ ರಾತ್ರಿ ಛಾವಣಿ ಕುಸಿದು ಬಿದ್ದ ಪರಿಣಾಮ ಎಲ್ಲಾ ಕೋಳಿಗಳು ಸಾವನ್ನಪ್ಪಿವೆ.ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ.

- Advertisement -

Latest News

error: Content is protected !!