Saturday, June 6, 2026
Homeತಾಜಾ ಸುದ್ದಿಕೊರೊನಾನ ಬಲೆ ಹಾಕಿ ಹಿಡಿಬೋದಾ? ಇಲ್ಲಿದ್ದಾರೆ ನೋಡಿ ಕೋವಿಡ್ ವೈರಸ್ ನೋಡಿದ ಜಗತ್ತಿನ ಏಕೈಕ ವ್ಯಕ್ತಿ

ಕೊರೊನಾನ ಬಲೆ ಹಾಕಿ ಹಿಡಿಬೋದಾ? ಇಲ್ಲಿದ್ದಾರೆ ನೋಡಿ ಕೋವಿಡ್ ವೈರಸ್ ನೋಡಿದ ಜಗತ್ತಿನ ಏಕೈಕ ವ್ಯಕ್ತಿ

- Advertisement -
- Advertisement -

ಬೆಂಗಳೂರು ಕೊರೊನಾ ಅನ್ನೋ ಹೆಮ್ಮಾರಿ ಆರ್ಭಟ ಸದ್ಯಕ್ಕಂತೂ ನಿಲ್ಲುವ ಯಾವ ಲಕ್ಷಣಗಳು ಕೂಡ ಕಾಣ್ತಿಲ್ಲ. ದಿನೇ ದಿನೇ ತನಗೆ ಬೇಕಾದಷ್ಟು ಜನರನ್ನು ಬಲಿ ಪಡೆದುಕೊಂಡು ಅಟ್ಟಹಾಸ ಮೆರೆಯುತ್ತಿದೆ. ಇಂದು ರಾಜ್ಯದಲ್ಲಿ ಬರೋಬ್ಬರಿ 229 ಮಂದಿಯನ್ನು ಬಲಿ ಪಡೆದಿದೆ. ಒಂದೇ ದಿನ 39047 ಮಂದಿಗೆ ಸೋಂಕು ದೃಢಪಟ್ಟಿದೆ.

ಅದರಲ್ಲೂ ಈ ಮಹಾಮಾರಿ ಎಲ್ಲಾದರೂ ಕಣ್ಣಿಗೆ ಕಾಣುವಂತ್ತಿದ್ದರೆ ಯಾವತ್ತೋ ಜನ ಅದನ್ನು ಗುಂಡು ಹಾಕಿ ಕೊಲೆ ಮಾಡುತ್ತಿದ್ದರು. ಆದರೆ ಇಲ್ಲೊಬ್ಬ ವ್ಯಕ್ತಿ ನಾನು ಕೊರೊನಾ ವೈರಸ್ ನನ್ನು ನೋಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಅದನ್ನು ಹಿಡಿಯೋದಕ್ಕೆ ಸಾಧ್ಯವಿಲ್ಲ. ಬಲೆ ಹಾಕಿದ್ರೂ ಹಿಡಿಯೋಕೆ ಸಾಧ್ಯ ಇಲ್ಲ ಎಂದಿದ್ದಾರೆ. ಅಲ್ಲದೇ ಕೊರೊನಾ ಹೇಗಿರುತ್ತೆ ಅನ್ನೋದನ್ನು ಸೂಪರ್ ಆಗಿ ವಿವರಿಸಿದ್ದಾರೆ. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕರ್ನಾಟಕ ಈ ವ್ಯಕ್ತಿಯ ಭಾಷೆ ಕೇಳಿದ್ರೆ ಅವರು ಉತ್ತರಕನ್ನಡ ಭಾಗದವರು ಅನ್ಸುತ್ತೆ. ಆದ್ರೆ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!