Tuesday, April 30, 2024
Homeಕರಾವಳಿಅಡಿಕೆ ಸುಲಿಯಲು ಜನ ಬೇಕಾದ್ರೆ ಸಂಪರ್ಕಿಸಿ: ಸಂಬಳ ಬೇಡ 2 ಚಾಕಲೇಟ್ ಕೊಟ್ಟರೆ ಸಾಕು

ಅಡಿಕೆ ಸುಲಿಯಲು ಜನ ಬೇಕಾದ್ರೆ ಸಂಪರ್ಕಿಸಿ: ಸಂಬಳ ಬೇಡ 2 ಚಾಕಲೇಟ್ ಕೊಟ್ಟರೆ ಸಾಕು

spot_img
- Advertisement -
- Advertisement -

ಮಂಗಳೂರು: ಅಯ್ಯೋ! ಅಕೆ ಸುಮಾರು ಉಂಟು ಸುಲಿಲಿಕ್ಕೆ ಜನ ಸಿಗುದಿಲ್ಲ ಎಂತ ಮಾಡೋದು ಅಂತಾ ಮಂಡೆ ಬೆಚ್ಚ ಮಾಡುವ ಜನಕ್ಕೆ ಒಂದು ಒಳ್ಳೆ ಜನವನ್ನು ನಾವು ಹುಡುಕಿ ಕೊಡ್ತೇವೆ. ವಿಷ್ಯ ಗೊತ್ತುಂಟಾ  ಇವ್ರಿಗೆ ನೀವು ಸಂಬಳ ಕೊಡ್ಬೇಕು ಅಂತಾ ಇಲ್ಲ. ಒಂದೆರಡು ಚಾಕಲೇಟ್ ಕೊಟ್ರೆ ಸಾಕು. ಅವರು ಎಷ್ಟು ಬೇಕಾದ್ರೂ ಅಡಿಕೆ ಸುಲ್ದು ಕೊಡ್ತಾರೆ.

ಅರೇ ಇವ್ರು ಎಂಥ ಹೇಳ್ತಿದಾರೆ ಮರ್ರೆ ಒಂದು ಸ ಅರ್ಥ ಆಗುವುದಿಲ್ಲ ಅಂತಾ ಮಂಡೆ ಬೆಚ್ಚ ಮಾಡ್ತಿದ್ದೀರಾ… ನಾವು ಹೇಳ್ತಿರೋದು ಸೋಷಿಯಲ್ ಮೀಡಿಯಾದಲ್ಲಿ  ಸದ್ಯ ವೈರಲ್ ಆಗಿರೋ ಪುಟ್ಟಿಯೊಬ್ಬಳ ವಿಡಿಯೋ ಬಗ್ಗೆ. ಮುದ್ದು ಪುಟಾಣಿಯೊಬ್ಬಲು ಅಡಿಕೆ ಸುಲಿಯುತ್ತಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಅಷ್ಟು ಚಿಕ್ಕ ವಯಸ್ಸಿಗೆ ಆಕೆ ಅಡಿಕೆಯ ಸುಲಿಯೋದನ್ನು ನೋಡಿದ್ರೆ ಎಂಥವರಾದ್ರೂ ಅಚ್ಚರಿ ಪಡದೇ ಇರೋದಿಲ್ಲ. ಅಷ್ಟು ಸಲೀಸಾಗಿ ಆಕೆ ಅಡಿಕೆ ಸುಲಿಯುತ್ತಾಳೆ. ಆದ್ರೆ ಆಕೆ ಎಲ್ಲಿಯವಳು ಅನ್ನೋದು ಮಾತ್ರ ಗೊತ್ತಾಗಿಲ್ಲ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸದ್ಯ ಆಕೆಯದ್ದೇ ಹವಾ…

- Advertisement -
spot_img

Latest News

error: Content is protected !!