Thursday, June 4, 2026
Homeತಾಜಾ ಸುದ್ದಿಬೆಳ್ತಂಗಡಿ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು: ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ...

ಬೆಳ್ತಂಗಡಿ: ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು: ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ದೇವರ ಚಿನ್ನಾಭರಣ ಕಳವು

- Advertisement -
- Advertisement -

ಬೆಳ್ತಂಗಡಿ: ಕಳ್ಳರು ದೇವಸ್ಥಾನಕ್ಕೆ ನುಗ್ಗಿ ದೇವರ ಚಿನ್ನಾಭರಣವನ್ನು ಕದ್ದ ಘಟನೆ ಬೆಳ್ತಂಗಡಿಯ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಕಳೆದ ರಾತ್ರಿ ಕಳ್ಳರು ನುಗ್ಗಿ ದೇವರ ಚಿನ್ನಾಭರಣವನ್ನು ಕಳವುಗೈದಿದ್ದಾರೆ.

ಗರ್ಭ ಗುಡಿ ಬಾಗಿಲು, ಗಣಪತಿ ಗುಡಿ ಬಾಗಿಲು, ದೇವಳಯದ ಕಚೇರಿ ಎರಡು ಬಾಗಿಲು ಮುರಿದು ಕೃತ್ಯವೆಸಗಿದ್ದಾರೆ. ಅಂದಾಜು 29 ಗ್ರಾಂ ಮೌಲ್ಯದ ದೇವರ ದೃಷ್ಟಿ , ದೇವರ ತಾಳಿ , ಬಲಿ ಮೂರ್ತಿ ತಾಳಿ ಹಾಗೂ ನಾಲ್ಕು ಲಕ್ಷ ಮೌಲ್ಯದ ಬೆಳ್ಳಿ ಕಿರೀಟ , ಬೆಳ್ಳಿ ಕವಚ , ಶಂಖದ ಬೆಳ್ಳಿ ಕವಚವನ್ನು ಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ದೇವಸ್ಥಾನದ  ಪ್ರಧಾನ ಅರ್ಚಕರು ಅರವಿಂದ ಭಟ್ ದೂರು ನೀಡಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಸ್ಥಳಕ್ಕೆ ಮಂಗಳೂರು ಬೆರಳಚ್ಚು ತಜ್ಞರು , ಪೊಲೀಸ್ ನಾಯಿ ಬಂದು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!