Friday, May 3, 2024
Homeತಾಜಾ ಸುದ್ದಿಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯಿಂದ ಮುದ್ದು ಕೃಷ್ಣ ಆನ್ ಲೈನ್ ಫೋಟೋ ಸ್ಪರ್ಧೆ:  4 ವರ್ಷದೊಳಗಿನ...

ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯಿಂದ ಮುದ್ದು ಕೃಷ್ಣ ಆನ್ ಲೈನ್ ಫೋಟೋ ಸ್ಪರ್ಧೆ:  4 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಸ್ಪರ್ಧೆಗೆ ಅವಕಾಶ

spot_img
- Advertisement -
- Advertisement -

ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಮುದ್ದು ಕೃಷ್ಣ ಆನ್ ಲೈನ್ ಫೋಟೋ ಸ್ಪರ್ಧೆ ಏರ್ಪಡಿಸಲಾಗಿದ್ದು ಇದರ ವಿಜ್ಞಾಪನಾ ಪತ್ರವನ್ನು ಕೆಮ್ಮಾರು ಈಶ ವಿಠಲದಾಸ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

ಮುದ್ದು ಕೃಷ್ಣ ONLINE PHOTO CONTEST-2022 ಕ್ಕೆ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ ಇರಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಭಾವಚಿತ್ರವನ್ನು ಜುಲೈ 31ರ ಒಳಗೆ ಜನನ ಪ್ರಮಾಣ ಪತ್ರದೊಂದಿಗೆ ಕಳುಹಿಸತಕ್ಕದು. ಮುದ್ದು ಕೃಷ್ಣ ಸ್ಪರ್ಧೆಗೆ 4ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನಿಮ್ಮ ಮಗುವಿನ ಮುದ್ದಾದ ಭಾವಚಿತ್ರವನ್ನು 9019387676 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಬೇಕು.ಭಾವಚಿತ್ರ ದೊಂದಿಗೆ ಮಗುವಿನ ಹೆಸರು ಮತ್ತು ಹೆತ್ತವರ ವಿಳಾಸ ಸ್ಪಷ್ಟ ವಾಗಿ ನಮೂದಿಸ ತಕ್ಕದ್ದು.

ಆಗಸ್ಟ್ 1 ರಂದು ತುಳುನಾಡ ರಕ್ಷಣಾ ವೇದಿಕೆ ಫೇಸ್ ಬುಕ್ ಪೇಜ್ ನಲ್ಲಿ ಭಾವಚಿತ್ರವನ್ನು ಪ್ರಕಟಿಸಲಾಗುವುದು. ಬಳಿಕ ಆಗಸ್ಟ್ 15 ರಂದು ಸಂಜೆ 7 ಗಂಟೆಯ ವರೆಗೆ ಶೇರ್ ಮತ್ತು ಲೈಕ್ ಮಾಡಲು ಅವಕಾಶವಿರುತ್ತದೆ. ಅತಿ ಹೆಚ್ಚು ಲೈಕ್ ಬಂದ ಭಾವಚಿತ್ರ ಗಳನ್ನು ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ವಿಜೇತರಿಗೆ ನಗದು ಬಹುಮಾನ ಫಲಕ+ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ಬಹುಮಾನಗಳು: ಪ್ರಥಮ ಬಹುಮಾನ- 3333+ಫಲಕ+ ಪ್ರಮಾಣ ಪತ್ರ,ದ್ವಿತೀಯ ಬಹುಮಾನ- 2222+ಫಲಕ ಪ್ರಮಾಣ ಪತ್ರ,ತೃತೀಯ ಬಹುಮಾನ-1111+ಫಲಕ+ ಪ್ರಮಾಣ ಪತ್ರ ನಾಲ್ಕನೇ ಬಹುಮಾನ-555+ಫಲಕ+ ಪ್ರಮಾಣ ಪತ್ರ .

ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿ, ಕೇಂದ್ರೀಯ ಕಛೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ,ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಮುಹಮ್ಮದ್ ಹ್ಯಾರೀಸ್,ಸದಾನಂದ್ ಜಿ.ಪುತ್ರನ್,ಗಣೇಶ್ ರಾವ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!