- Advertisement -
- Advertisement -
ಕಾಸರಗೋಡು: ಇಲ್ಲಿನ ಪೆರ್ಲದ ಇಡಿಯಡ್ಕದ ಮನೆಯೊಂದಕ್ಕೆ ಕಳ್ಳರು ನುಗ್ಗಿ ಎಂಟು ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ.ನಗದು ಕಳವುಗೈದ ಘಟನೆ ನಡೆದಿದೆ.
ಘಟನೆಯು ಅಬ್ಬಾಸ್ ಆಲಿ ರವರ ಮನೆಯಲ್ಲಿ ನಡೆದಿದೆ.
ಈ ಘಟನೆಯು ಮನೆಯವರು ಮಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ನಡೆದಿದ್ದು, ಕಳ್ಳರು ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ. ನಂತರದಲ್ಲಿ ಕೋಣೆಗೆ ಪ್ರವೇಶಿಸಿ ಅಲ್ಲಿದ್ದ ಕಪಟನ್ನು ಮುರಿದು ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ಘಟನೆಯ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
- Advertisement -