Wednesday, June 26, 2024
Homeಅಪರಾಧಪುತ್ತೂರು: ಮಧ್ಯರಾತ್ರಿ ಅಡಿಕೆ ಕದ್ದೊಯ್ಯಲು ಯತ್ನ

ಪುತ್ತೂರು: ಮಧ್ಯರಾತ್ರಿ ಅಡಿಕೆ ಕದ್ದೊಯ್ಯಲು ಯತ್ನ

spot_img
- Advertisement -
- Advertisement -

ಪುತ್ತೂರು: ಪುತ್ತೂರಿನ ಕೋಡಿಂಬಾಡಿಯ ಬಾರಿಕೆ ಮೇಲಿನಹಿತ್ಲು ಮನೆಯೊಂದರ ಅಂಗಳದಲ್ಲಿ ಹಾಕಿದ್ದ ಅಡಿಕೆಯನ್ನು ಕದ್ದೊಯ್ಯಲು ಸಂಚು ಮಾಡಿದ ಮೂವರು ಕಳ್ಳರ ಪೈಕಿ ಓರ್ವನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಮತ್ತು ಇಬ್ಬರು ಬೈಕ್ ಬಿಟ್ಟು ಪರಾರಿಯಾದ ಘಟನೆ ಜ.28ರ ಮಧ್ಯರಾತ್ರಿ ಸರಿಸುಮಾರು 12:30ಕ್ಕೆ ನಡೆದಿದೆ.


ತಾಲೂಕು ಪಂಚಾಯತ್ ಮಾಜಿ ಸದಸ್ಯ ಲೀಲಾವತಿ ಲಕ್ಷ್ಮಣ ಗೌಡರವರ ಮನೆಯ ಅಂಗಳದಲ್ಲಿ ಅಡಿಕೆಯನ್ನು ಹಾಕಲಾಗಿತ್ತು. ಕಳವು ಮಾಡಲೆಂದು ಯತ್ನಿಸಿದ ಮೂವರು ಅಡಿಕೆಯನ್ನು ಗೋಣಿಚೀಲದಲ್ಲಿ ತುಂಬಿಸಿ ಬೈಕ್ನಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸುತ್ತಿದ್ದ ವೇಳೆ. ಲೀಲಾವತಿ ಅವರ ಪುತ್ರ ದೀಕ್ಷಿತ್ ಅವರು ಮನೆಗೆ ವಾಪಸಾಗುತ್ತಿದ್ದ ವೇಳೆ ಕಳ್ಳರನ್ನು ಗಮನಿಸಿ ಮನೆಯವರಿಗೆ ಕರೆ ಮಾಡಿದ್ದಾರೆ. ಕೂಡಲೇ ಕಳ್ಳರು ಅಲ್ಲಿಂದ ಪಾರಾಗಲು ಯತ್ನಿಸಿದ ವೇಳೆ ಇಬ್ಬರು ಬೈಕ್ನಲ್ಲಿ ಪರಾರಿಯಾಗಿ, ಓರ್ವನನ್ನು ಹಿಡಿದು ಪುತ್ತೂರು ನಗರ ಪೊಲೀಸ್ ಠಾಣೆಗೆ ಬೈಕ್ ಸಹಿತ ಒಪ್ಪಿಸಿದ್ದಾರೆ.

ಪೋಲಿಸ್ ವಶವಾದ ವ್ಯಕ್ತಿ ಕಡೆಶಿವಾಲಯದ ಸಚಿನ್ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!