Thursday, June 4, 2026
Homeಕರಾವಳಿಉಪ್ಪಿನಂಗಡಿ; ಏಳು ಅಂಗಡಿಗಳಲ್ಲಿ ಕರಾಮತ್ತು ತೋರಿಸಿದ ಕಳ್ಳ

ಉಪ್ಪಿನಂಗಡಿ; ಏಳು ಅಂಗಡಿಗಳಲ್ಲಿ ಕರಾಮತ್ತು ತೋರಿಸಿದ ಕಳ್ಳ

- Advertisement -
- Advertisement -

ಉಪ್ಪಿನಂಗಡಿ; ಕಳ್ಳನೊಬ್ಬ ಏಳು ಅಂಗಡಿಗಳಿಗೆ ನುಗ್ಗಿ ತನ್ನ ಕರಾಮತ್ತು ತೋರಿಸಿದ ಘಟನೆ ಉಪ್ಪಿನಂಗಡಿಯ ಬ್ಯಾಂಕ್ ಸ್ಟ್ರೀಟ್‌ ನಲ್ಲಿ ನಡೆದಿದೆ.

ಚಿನ್ನದ ಅಂಗಡಿಯೊಂದಕ್ಕೆ ನುಗ್ಗಿ ಸೇಫ್ ಲಾಕರ್‍ ಅನ್ನು ತೆರೆಯಲು ಯತ್ನಿಸಿದ್ದಾನೆ. ಬಳಿಕ ಅಲ್ಲಿ ಡ್ರವರ್ ನಲ್ಲಿದ್ದ ಹಣ ಕಳ್ಳತನ ಮಾಡಿದ್ದಾನೆ.ಮತ್ತೊಂದು ಅಂಗಡಿಗೆ ನುಗ್ಗಿ ಮೊಬೈಲ್ ಕಳ್ಳತನ ಮಾಡಿದ್ದು, ನಂತರ ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳ ಎರಡು ಬಾತ್ ಟವೆಲ್ ಕದ್ದಿದ್ದಾನೆ.

ಇದಲ್ಲದೆ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿಯ ಹೋಟೆಲ್, ಪೀಠೋಪಕರಣಗಳ ಅಂಗಡಿ, ಜನರಲ್ ಸ್ಟೋರ್, ದಿನಸಿ ಅಂಗಡಿಗಳಿಗೂ ಕಳ್ಳರು ನುಗ್ಗಿ ಸಿಕ್ಕಿದ್ದನ್ನೆಲ್ಲಾ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಫರ್ನಿಚರ್ ಅಂಗಡಿಯಲ್ಲಿದ್ದ ದುಬಾರಿ ಬೆಲೆಯ ವಾಚ್ ಕಳ್ಳತನವಾಗಿದೆ. ಈ ಎಲ್ಲಾ ಏಳು ಕಳ್ಳತನಗಳು ಒಂದೇ ರೀತಿಯದ್ದಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.ಇನ್ನು ಶಂಕಿತ ಕಳ್ಳನ ಸಿಸಿಟಿವಿ ದೃಶ್ಯ ಕೂಡ ಸೆರೆಯಾಗಿದೆ. ಪ್ರತಿಯೊಂದು ಅಂಗಡಿಯೊಳಗೆ ನುಗ್ಗಿದ ಕಳ್ಳ ಸಿಸಿಟಿವಿಯ ದಿಕ್ಕು ಬದಲಾಯಿಸುವ ಪ್ರಯತ್ನ ಮಾಡಿದ್ದು, ಆ ವೇಳೆ ಆತನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಉಪ್ಪಿನಂಗಡಿ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!