Thursday, June 4, 2026
Homeತಾಜಾ ಸುದ್ದಿವಿಚ್ಛೇದನ ಬಯಸುವ ದಂಪತಿ ಇನ್ಮುಂದೆ ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ: ಸುಪ್ರೀಂ ಕೋರ್ಟ್

ವಿಚ್ಛೇದನ ಬಯಸುವ ದಂಪತಿ ಇನ್ಮುಂದೆ ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ: ಸುಪ್ರೀಂ ಕೋರ್ಟ್

- Advertisement -
- Advertisement -

ದೆಹಲಿ: ವಿಚ್ಛೇದನ ಪಡೆಯಲು ಬಯಸುವ ದಂಪತಿ ಇನ್ನು ಮುಂದೆ ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಇದುವರೆಗೂ ವಿಚ್ಛೇದನ ಬಯಸುವ ದಂಪತಿ ಕಾನೂನಿನ ಪ್ರಕಾರ ಆರು ತಿಂಗಳು ಒಟ್ಟಿಗೇ ಇರಬೇಕಿತ್ತು. ಆದ್ರೆ ಇದೀಗ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದ್ದು, ಇನ್ನು ಮುಂದೆ ದಂಪತಿ ಪರಸ್ಪರ ಒಪ್ಪಿಗೆ ಇದ್ದಲ್ಲಿ ಆರು ತಿಂಗಳು ಕಡ್ಡಾಯವಾಗಿ ಕಾಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನ ಪೀಠ ಈ ತೀರ್ಪು ಪ್ರಕಟಿಸಿದೆ.

- Advertisement -

Latest News

error: Content is protected !!