Wednesday, June 3, 2026
Homeಕರಾವಳಿಕಾರ್ಕಳ; ಟಿಪ್ಪರ್ ನಲ್ಲಿ ಬಂದು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿದ ಕಳ್ಳರು

ಕಾರ್ಕಳ; ಟಿಪ್ಪರ್ ನಲ್ಲಿ ಬಂದು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿದ ಕಳ್ಳರು

- Advertisement -
- Advertisement -

ಕಾರ್ಕಳ: ಟಿಪ್ಪರ್‌ನಲ್ಲಿ ಬಂದು ಕಳ್ಳರು ಜ್ಯುವೆಲ್ಲರಿಗೆ ಶಾಪ್ ಗೆ ನುಗ್ಗಿ  ಸಾವಿರಾರು ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಘಟನೆ ನಿಟ್ಟೆ ಗ್ರಾಮದ ಫಾರೆವರ್ ಹೋಟೇಲ್ ಬಳಿ ನಡೆದಿದೆ.

ಮಧ್ಯರಾತ್ರಿ ಜಾವ 1:30 ರಿಂದ 2:00 ಗಂಟೆಯ ನಡುವಿನ ಅವಧಿಯಲ್ಲಿ ಕೆಎ19 ಎನ್‌5279 ನಂಬರಿನ ಟಿಪ್ಪರ್‌ನಲ್ಲಿ ಬಂದ ಕಳ್ಳರು, ಆರಾಧ್ಯ ಜುವೆಲ್ಲರ್ ಅಂಗಡಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದ್ದಾರೆ. ಬಳಿಕ ಶೋಕಸಿನಲ್ಲಿಟ್ಟಿದ್ದ ಸುಮಾರು 20,000 ರೂ. ಮೌಲ್ಯದ ಸುಮಾರು 260 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಟಿಪ್ಪರ್‌ನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!