Saturday, June 6, 2026
HomeUncategorizedಉಡುಪಿ: ಚಡ್ಡಿ ಧರಿಸಿ ಮನೆಗೆ ಕನ್ನ;ಕೃತ್ಯದ ಬಳಿಕ ಸಿಂಗಲ್ ಚಪ್ಪಲಿ ಬಿಟ್ಟು ಹೋಗುವ ಗ್ಯಾಂಗ್!

ಉಡುಪಿ: ಚಡ್ಡಿ ಧರಿಸಿ ಮನೆಗೆ ಕನ್ನ;ಕೃತ್ಯದ ಬಳಿಕ ಸಿಂಗಲ್ ಚಪ್ಪಲಿ ಬಿಟ್ಟು ಹೋಗುವ ಗ್ಯಾಂಗ್!

- Advertisement -
- Advertisement -

ಉಡುಪಿ: ರಾತ್ರಿ ವೇಳೆ ಚಡ್ಡಿ ಧರಿಸಿಕೊಂಡು ಮನೆಗಳಿಗೆ ಕನ್ನ ಹಾಕಲು ಬರುವ ನಟೋರಿಯಸ್ ಗ್ಯಾಂಗ್ ಒಂದು ಉಡುಪಿಯಲ್ಲಿ ಭೀತಿ ಹುಟ್ಟಿಸಿದೆ.

ಚಡ್ಡಿ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಬರುವ ಕುಕೃತ್ಯ ಉಡುಪಿ ತಾಲೂಕಿನ ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಬಯಲಾಗಿದೆ.

ಕಳ್ಳತನಕ್ಕೆ ಬರುವ ವೇಳೆ ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ತಂಡ, ಕೃತ್ಯ ಎಸಗಿದ ಬಳಿಕ ಒಂದು ಚಪ್ಪಲಿಯನ್ನು ಸ್ಥಳದಲ್ಲೇ ಬಿಟ್ಟು ಹೋಗುತ್ತದೆ ಎನ್ನಲಾಗಿದೆ.

ಚಡ್ಡಿ ಧರಿಸಿ ಮನೆ ದರೋಡೆಗೆ ಬರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

- Advertisement -

Latest News

error: Content is protected !!