Monday, June 8, 2026
Homeಕರಾವಳಿಮಂಗಳೂರುಬಂಟ್ವಾಳ; ಫರಂಗಿಪೇಟೆಯ ಬಟ್ಟೆಯಂಗಡಿಯೊಂದರಲ್ಲಿ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಪೊಲೀಸರು

ಬಂಟ್ವಾಳ; ಫರಂಗಿಪೇಟೆಯ ಬಟ್ಟೆಯಂಗಡಿಯೊಂದರಲ್ಲಿ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

 ಬಂಟ್ವಾಳ; ಫರಂಗಿಪೇಟೆಯ ವಿಶ್ವಾಸ ಸಿಟಿ ಸೆಂಟರ್ ನ ವೈಟ್  ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ  ದಿನಾಂಕ 11/12-04-2025 ರಂದು ರಾತ್ರಿ ಕಳ್ಳರು ಅಂಗಡಿಯ ಶಟರ್ ಗೆ ಅಳವಡಿಸಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿದ್ದ ನಗದನ್ನು ಕಳವುಗೈದ ಘಟನೆಗೆ‌ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

ಮಂಗಳೂರಿನ ಅಡ್ಯಾರು ಗ್ರಾಮದ ಕಣ್ಣೂರು ನಿವಾಸಿ ನಝೀರ್‌ ಮಹಮ್ಮದ್‌ (26)  ಬಂಧಿತ. ಈತನಿಂದ ರೂ.1,09,490/-ನಗದು ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

 ಆರೋಪಿ ನಝೀರ್‌ ಮಹಮ್ಮದ್‌ ಎಂಬಾತನು ಈಗಾಗಲೇ  2024ನೇ ವರ್ಷದಲ್ಲಿ  ಕಂಕನಾಡಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ  ಮಂಗಳೂರು,ಕಣ್ಣೂರು ಟಿ.ವಿ.ಎಸ್‌ ಶೊರೂಮ್‌ ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ‌ ಗ್ರಾಮಾಂತರ ಪೊಲೀಸ್‌ ಠಾಣಾ  ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ.ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿತಂಡ ಕಾರ್ಯಾಚರಣೆ ನಡೆಸಿರುತ್ತಾರೆ.

- Advertisement -

Latest News

error: Content is protected !!