Monday, June 8, 2026
Homeಕರಾವಳಿಮಂಗಳೂರುಉಜಿರೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ತಡೆದ ಪ್ರಕರಣ; ಬೆಳ್ತಂಗಡಿ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ...

ಉಜಿರೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ತಡೆದ ಪ್ರಕರಣ; ಬೆಳ್ತಂಗಡಿ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಏ.19 ರಂದು ಸಂಜೆ ತಡೆದ ಘಟನೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿಗಳಾದ ಉಜಿರೆ ನಿವಾಸಿಗಳಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಕೆ.ವಿ.ಗೌಡ, ಪ್ರಭಾಕರ, ಗಣೇಶ್ ಹಾಗೂ ಇತರರ ವಿರುದ್ದ  ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುರಳೀಧರ ನಾಯ್ಕ್ ಕೆ.ಜಿ ಅವರ ದೂರಿನಂತೆ ಏ.19 ರಂದು ಪ್ರಕರಣ ದಾಖಲಿಸಲಾಗಿದೆ. ಪುನೀತ್ ಕೇರೆಹಳ್ಳಿ ಅವರು ಉಜಿರೆಗೆ ಬಂದರೆ ಉಜಿರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ ಭಂಗ ಉಂಟುಮಾಡುವ ಸಾಧ್ಯತೆ ಇದ್ದ ಕಾರಣ ದ.ಕ ಜಿಲ್ಲಾಧಿಕಾರಿಯವರು ಸರ್ವಜನಿಕ ಹಿತದೃಷ್ಟಿಯಿಂದ ಪುನೀತ್ ಕೇರೆಹಳ್ಳಿ ಗೆ ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದಿನೊಳಗೆ ಪ್ರವೇಶಿಸದಂತೆ ಕಲಂ163 ಬಿ.ಎನ್.ಎಸ್ 2023 ರಂತೆ ನಿರ್ಭಂಧಿಸಿ ಮಾನ್ಯ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು.

ಆದರೆ ಆದೇಶವನ್ನು ಉಲ್ಲಂಘಿಸಿ ಏ.19 ರಂದು ಶನಿವಾರ ಸಂಜೆಯ ವೇಳೆ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಬಳಿ ಸಾರ್ವಜನಿಕ ರಸ್ತೆಗೆ ಬಂದಾಗ ಮಹೇಶ್ ಶೆಟ್ಟಿ ತಿಮರೋಡಿಯ ಬೆಂಬಲಿಗರಾದ ಅನಿಲ್ ಅಂತರ, ಮನೋಜ್ ಕುಂಜರ್ಪ,ಪ್ರಜ್ವಲ್ ಕೆ.ವಿ.ಗೌಡ, ಹಾಗೂ ಇತರರು ಗುಂಪು ಸೇರಿಕೊಂಡು ಉಜಿರೆ ಎಸ್.ಡಿ.ಎಂ ಕಾಲೇಜಿನ ಎದುರು ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ ಶಾಂತಿ ಭಂಗ ತರುವ ಉದ್ದೇಶದಿಂದ ಪುನೀತ್ ಕೆರೆಹಳ್ಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!