Friday, June 5, 2026
Homeಕರಾವಳಿವಿಟ್ಲ:  ಸೇವಾ ಸಹಕಾರಿ ಬ್ಯಾಂಕ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನ

ವಿಟ್ಲ:  ಸೇವಾ ಸಹಕಾರಿ ಬ್ಯಾಂಕ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನ

- Advertisement -
- Advertisement -

ವಿಟ್ಲ: ದಕ್ಷಿಣ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವಿನಲ್ಲಿ ನಡೆದಿದೆ.

ಬ್ಯಾಂಕ್ ನ ಮುಂಬಾಗಿಲಿನ ಶಟರ್ ಒಡೆದು ಬ್ಯಾಂಕ್ ನ ಒಳಗೆ ನುಗ್ಗಿದ ಕಳ್ಳರು ಎಲ್ಲಾ ಕಡೆ ಜಾಲಾಡಿದ್ದಾರೆ. ಶೇಪ್ ಲಾಕರ್ ವ್ಯವಸ್ಥೆ ಇರುವ ಬ್ಯಾಂಕ್ ಆಗಿದ್ದರಿಂದ ಕಳ್ಳರು ಬರಿಗೈಯಲ್ಲಿ ವಾಪಾಸು ಹೋಗಿದ್ದಾರೆ. ಬೀಗ ಹಾಕುವ ಸ್ಥಳದಲ್ಲಿ ಶಟರ್ ನ್ನು ಗ್ಯಾಸ್ ಕಟ್ಟಿಂಗ್ ಮೂಲಕ ತುಂಡು ಮಾಡಿ ಕಬ್ಬಿಣದ ಲಿವರ್ ಬಳಸಿ ಶಟರ್ ಮುರಿದು ಬ್ಯಾಂಕ್ ನ ಒಳಗೆ ನುಗ್ಗಿ ಜಾಲಾಡಿ ಕಳವಿಗೆ ಪ್ರಯತ್ನಿಸಿ ಸಾಧ್ಯವಾಗದೆ ವಾಪಾಸು ಹೋಗಿದ್ದಾರೆ.

ಬ್ಯಾಂಕ್ ಗೆ ಅಳವಡಿಸಿದ ಸಿ.ಸಿ.ಕ್ಯಾಮರಾ ವನ್ನು ತಿರುಗಿಸಿ ಬಳಿಕ ಒಳಗೆ ನುಗ್ಗಿದ್ದಾರೆ ಅಂತ ಹೇಳಲಾಗುತ್ತಿದೆ.‌ ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಮೊದಲೇ ಸಾರ್ವಜನಿಕರು ಬ್ಯಾಂಕ್ ನೊಳಗೆ ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!