Sunday, April 28, 2024
Homeಕರಾವಳಿಬೆಳ್ತಂಗಡಿ : ಉಜಿರೆಯ ಎರಡು ಅಂಗಡಿಗೆ ನುಗ್ಗಿದ ಮಿಡ್ ನೈಟ್ ಕಳ್ಳ:ಬೆಳ್ತಂಗಡಿ ಪೊಲೀಸರಿಗೆ ಸವಾಲಾದ ಕಳ್ಳರ...

ಬೆಳ್ತಂಗಡಿ : ಉಜಿರೆಯ ಎರಡು ಅಂಗಡಿಗೆ ನುಗ್ಗಿದ ಮಿಡ್ ನೈಟ್ ಕಳ್ಳ:ಬೆಳ್ತಂಗಡಿ ಪೊಲೀಸರಿಗೆ ಸವಾಲಾದ ಕಳ್ಳರ ಗ್ಯಾಂಗ್

spot_img
- Advertisement -
- Advertisement -

ಬೆಳ್ತಂಗಡಿ : ಕಳೆದ ಒಂದು ವಾರಗಳಿಂದ ಬೆಳ್ತಂಗಡಿ ಸುತ್ತಮುತ್ತ ಕಳ್ಳರ ಉಪಟಳ ಹೆಚ್ಚಾಗಿದೆ. ಪ್ರತಿದಿನ ಒಂದಲ್ಲ ಒಂದು ಕಡೆಗಳಲ್ಲಿ ಮಿಡ್ ನೈಟ್ ಕನ್ನ ಹಾಕುತ್ತಿದ್ದು ಬೆಳ್ತಂಗಡಿ ಪೊಲೀಸರಿಗೆ ಕಳ್ಳರ ಗ್ಯಾಂಗ್ ಸವಾಲಾಗಿ ಪರಿಣಾಮಿಸಿದೆ. ಇದೀಗ ಉಜಿರೆಯಲ್ಲಿ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದು ಬೆಳಕಿಗೆ ಬಂದಿದೆ.

ಉಜಿರೆಯಲ್ಲಿ ಎರಡು ಅಂಗಡಿಗೆ ಕನ್ನ:  ಉಜಿರೆ ಸರ್ಕಲ್ ಬಳಿ ಇರುವ ಸುರಕ್ಷಾ ಮೆಡಿಕಲ್ ಮತ್ತು ಪಕ್ಕದ ಶ್ರೀ ನಿಧಿ ಸ್ಟೋರ್ ಗೆ ಜ.16 ರ ಬೆಳಗ್ಗಿನ ಜಾವ ಸುಮಾರು 4:15 ಕ್ಕೆ ಮೇಲಿನ ಕಬ್ಬಿಣದ ಶೀಟ್ ಕಟ್ ಮಾಡಿ ನಂತರ ಜಾರಿಸಿ ಒಳನುಗಿದ್ದ ಒಬ್ಬಂಟಿ ಕಳ್ಳ ಲೈಟ್ ಆನ್ ಮಾಡಿ ಹುಡುಕಾಟ ನಡೆಸಿದ್ದಾನೆ. ಏನೂ ಸಿಗದಿದ್ದಾಗ ಬ್ರೆಷ್, ಸೋಪು, ಫರ್ಫ್ಯೂಮ್, ಫ್ರೀಜ್ ನಲ್ಲಿದ್ದ ರೆಡ್ ಬುಲ್ ಟಿನ್ ನ್ನು ಪ್ಲಾಸ್ಟಿಕ್ ಚೀಲದೊಳಗೆ ಹಾಕಿಕೊಂಡು ಅಲ್ಲಿದ್ದ ಲ್ಯಾಪ್ ಟಾಪ್ ಹಿಡಿದುಕೊಂಡು ಬಂದ ದಾರಿಯಲ್ಲಿಯೇ ವಾಪಸ್ ಮೇಲೆ ಹತ್ತಿ ಹೋಗಿದ್ದಾನೆ.

ಲ್ಯಾಪ್ ಟಾಪ್ ಗೆ ಹಾನಿ: ಉಜಿರೆ ಸುರಕ್ಷಾ ಮೆಡಿಕಲ್ ನಿಂದ ಹೋಗುವಾಗ ಲ್ಯಾಪ್ ಟಾಪ್ ಹಿಡಿದುಕೊಂಡು ಹೋಗಿ ಹೊರಗಡೆ ರಸ್ತೆಯಲ್ಲಿ ನೆಲಕ್ಕೆ ಹೊಡೆದುಹಾಕಿ ಹಾನಿ ಮಾಡಿದ್ದಾನೆ. ಲ್ಯಾಪ್ ಟಾಪ್  ಸಂಪೂರ್ಣ ಹೊಡೆದುಹೋಗಿದೆ.

ಸಿಸಿ ಕ್ಯಾಮಾರದಲ್ಲಿ ಒಬ್ಬಂಟಿ ಕಳ್ಳತನ ಚಹರೆ ಸೆರೆ: ಎರಡು ಅಂಗಡಿಗಳಿಗೆ ನುಗ್ಗಿದ ಒಬ್ಬಂಟಿ ಕಳ್ಳನ ಸಂಪೂರ್ಣ ದೃಶ್ಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಅಂಗಡಿಗಳಿಗೆ ಬಂದು ಮಾಹಿತಿ ಕಲೆ ಹಾಕಿದ್ದು ಕಳ್ಳನ ಗುರುತು ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಪೊಲೀಸರಿಂದ ರಾತ್ರಿ ಗಸ್ತು ಹೆಚ್ಚಳ: ಬೆಳ್ತಂಗಡಿ ಸುತ್ತಮುತ್ತ ಕಳ್ಳರ ಕೃತ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ರಾತ್ರಿ ಪೂರ್ತಿ ಮಫ್ತಿಯಲ್ಲಿ ಗಸ್ತು ಹೆಚ್ಚು ಮಾಡಿದ್ದು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!