Thursday, June 4, 2026
Homeಕರಾವಳಿಬೆಳ್ತಂಗಡಿಯಲ್ಲಿ ಹೂವಿನ ವ್ಯಾಪಾರಿಯ ಮನೆಯಲ್ಲಿರಿಸಿದ್ದ 4 ಲಕ್ಷ ರೂ. ಕಳ್ಳತನ

ಬೆಳ್ತಂಗಡಿಯಲ್ಲಿ ಹೂವಿನ ವ್ಯಾಪಾರಿಯ ಮನೆಯಲ್ಲಿರಿಸಿದ್ದ 4 ಲಕ್ಷ ರೂ. ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಹೂವಿನ ವ್ಯಾಪಾರಿಯೊಬ್ಬರು ತಮ್ಮ ಮನೆಯಲ್ಲಿರಿಸಿದ್ದ 4 ಲಕ್ಷ ರೂಪಾಯಿ ಕಳ್ಳತನವಾಗಿರುವ ಘಟನೆ ಬೆಳ್ತಂಗಡಿಯ ಹೂಮೇಲಂತಬೆಟ್ಟು ಎಂಬಲ್ಲಿ ನಡೆದಿದೆ.  ಗ್ರಾಮದ ಪಕ್ಕಿದಕಲ ಸುರೇಶ್ ನಾಯ್ಕ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬೆಳ್ತಂಗಡಿಯ ಸಂತೆಕಟ್ಟೆಯ ಎಂ.ಎಚ್.ಪ್ಲವರ್ಸ್ ಅಂಗಡಿ ಮಾಲೀಕ ಕಾಶಿಪಟ್ಣ ನಿವಾಸಿ ಹೈದರಾಲಿ (30) ಅವರ ಮನೆಯಿಂದ 4 ಲಕ್ಷ ರೂ. ಕಳ್ಳತನವಾಗಿದೆ.

ಆ.3 ರಂದು ಹೂ ಖರೀದಿ ಮಾಡುವ ಸಲುವಾಗಿ ಮನೆಯ ಕಪಾಟಿನ ಡ್ರಾಯರ್ ನಲ್ಲಿ ಹಣವನ್ನು ಇಟ್ಟಿದ್ದರು ಎನ್ನಲಾಗಿದೆ. ಅವರು ಮನೆಗೆ ಬೀಗ ಹಾಕಿ ಎಂದಿನಂತೆ ವ್ಯಾಪಾರಕ್ಕೆ ತೆರಳಿದ್ದರು. ವ್ಯಾಪಾರ ಮುಗಿಸಿ ತಮ್ಮ ಸ್ವಂತ ಮನೆಯಾದ ಕಾಶಿಪಟ್ಣಕ್ಕೆ ತೆರಳಿ ಉಳಿದುಕೊಂಡಿದ್ದರು. ಆ.6 ರಂದು ಬೆಳಗ್ಗೆ ಬಾಡಿಗೆ ಮನೆಗೆ ಬಂದು ಬೀಗ ತೆಗೆದಾಗ ಕಪಾಟಿನ ಬೀಗ ಮುರಿದು ಕಳ್ಳರು 4ಲಕ್ಷ ರೂ. ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!