- Advertisement -
- Advertisement -
ಉಡುಪಿ: ದೈವಸ್ಥಾನಕ್ಕೆ ನುಗ್ಗಿ ಸಾವಿರಾರು ರೂಪಾಯಿ ಕಳ್ಳತನ ಮಾಡಿರುವ ಘಟನೆ ಉಡುಪಿಯ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಸಿಂಗಾರ ಗರಡಿಯಲ್ಲಿ ನಡೆದಿದೆ.
ಈ ಬಗ್ಗೆ ದೈವದ ಮನೆಯಲ್ಲಿ ಪೂಜೆ ಮಾಡಿಕೊಂಡು ಬರುತ್ತಿರುವ ನಾಗೂರಿನ ಗಣೇಶ್ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆಷಾಢ ಮಾಸದ ಹಿನ್ನೆಲೆಯಲ್ಲಿ ಜುಲೈ 16ರಿಂದ ದೈವ ಮನೆಯಲ್ಲಿ ಯಾವುದೇ ಪೂಜೆ ನಡೆದಿರಲಿಲ್ಲ. ನಿನ್ನೆ ಸಂಜೆ 4ಗಂಟೆಗೆ ಗಣೇಶ್ ಪೂಜಾರಿ ದೈವದ ಮನೆಗೆ ಹೋಗಿದ್ದರು. ಈ ವೇಳೆ ಕಳ್ಳತನ ನಡೆದಿರುವ ವಿಚಾರ ಗೊತ್ತಾಗಿದೆ.
ಕಳ್ಳರು ದೈವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿ ಒಳಗಡೆ ಹಾಗೂ ಹೊರಗಡೆ ಇಟ್ಟಿರುವ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು 30ರಿಂದ 35 ಸಾವಿರ ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -