Saturday, May 18, 2024
Homeಕರಾವಳಿಉಡುಪಿಉಡುಪಿ: ತ್ರಿವಳಿ ತಲಾಖ್ ಕೇಸ್ - ತನ್ನ ಮೇಲೆ ಮಾಡಿದ ವರದಕ್ಷಿಣೆ ಕಿರುಕುಳ, ತಲಾಖ್ ಆರೋಪ...

ಉಡುಪಿ: ತ್ರಿವಳಿ ತಲಾಖ್ ಕೇಸ್ – ತನ್ನ ಮೇಲೆ ಮಾಡಿದ ವರದಕ್ಷಿಣೆ ಕಿರುಕುಳ, ತಲಾಖ್ ಆರೋಪ ಸುಳ್ಳು: ಮೊಹಮ್ಮದ್ ಯೂಸುಫ್

spot_img
- Advertisement -
- Advertisement -

ಉಡುಪಿ: ತನ್ನ ಪತ್ನಿ ಶೆಹ್ನಾಜ್‌‌ಗೆ ಮೂಳೂರು ಮೂಲದ ವಿವಾಹಿತ ಶರೀಫ್ ನೊಂದಿಗೆ ಹಲವಾರು ವರ್ಷದಿಂದ ಅನೈತಿಕ ಸಂಬಂಧವಿತ್ತು. ಕಳೆದ ಮೂರು ವರ್ಷದಿಂದ ಸಂಪರ್ಕದಲ್ಲಿಲ್ಲ. ತಾನು ಮತ್ತೆ ವಿದೇಶಕ್ಕೆ ಹೋಗಬಾರದೆಂಬ ಹುನ್ನಾರದಿಂದ ನನ್ನ ವಿರುದ್ದ ತ್ರಿವಳಿ ತಲಾಖ್ ಕೇಸು ದಾಖಲು ಮಾಡಲಾಗಿದೆ ಎಂದು ಪತಿ ಮೊಹಮ್ಮದ್ ಯೂಸುಫ್ ಆರೋಪಿಸಿದ್ದಾರೆ.

ಮೊದಲ ಹೆಂಡತಿಗೆ ತ್ರಿವಳಿ ತಲಾಖ್ ನೀಡಿ ಎರಡನೇ ಮದುವೆಯಾಗಿ ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದರು.

ಈ ಕುರಿತು ಉಡುಪಿ ಪತ್ರಿಕಾ ಭವನದಲ್ಲಿ ಸ್ಪಷ್ಟನೆ ನೀಡಿರುವ ಯೂಸುಫ್, ನನ್ನ ಮೇಲೆ ಮಾಡಿದ ವರದಕ್ಷಿಣೆ ಕಿರುಕುಳ, ತಲಾಖ್ ಆರೋಪ ಸುಳ್ಳು. ನಾನು ಯಾವುದೇ ಎರಡನೇ ಮದುವೆ ಆಗಿಲ್ಲ, ಹೌದು ಎಂದಾದರೆ ಸಾಕ್ಷಿ ತೋರಿಸಲಿ. ಯಾವ ಕಿರುಕುಳ ನೀಡಿಲ್ಲ. ಅವಳಿಗೆ ನಾನೇ 70 ಲಕ್ಷ ಕೊಟ್ಟಿದ್ದೇನೆ. ತ್ರಿಪಲ್ ತಲಾಖ್ ಕಾನೂನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಮೂಳೂರು ಮೂಲದ ಶರೀಫ್ ತನಗೆ ಜೀವ ತೆಗೆಯುವ ಬೆದರಿಕೆ ಹಾಕಿದ್ದಾನೆ. ಶೆಹ್ನಾಜ್ ಮದುವೆ ಆಗಿ ಒಂದು ವರ್ಷದ ನಂತರ ಸಂಸಾರದಲ್ಲಿ ಗಲಾಟೆ ಮಾಡಿದರು. ಆಮೇಲೆ ಅವರೇ ಒಮ್ಮೆ ಫೋನ್ ಮೂಲಕ ತ್ರಿಪಲ್ ತಲಾಖ್ ಹೇಳಿದ್ದಾರೆ. ಅವರು ತಾನು ಆಕೆಯ ತಂದೆಗೆ ತಲಾಖ್ ಹೇಳಿದ್ದೇನೆ ಎನ್ನುವ ದಿನ ನಾನು ಉಡುಪಿಯಲ್ಲಿ ಇರಲಿಲ್ಲ. ಮಾರ್ಚ್ 3ರಂದು ವೈಯಕ್ತಿಕ ತುರ್ತು ಕಾರಣಕ್ಕಾಗಿ ಊರಿಗೆ ಬಂದಿದ್ದೆ. ಈಗ ಕೇಸು ದಾಖಲಾಗಿ ಊರಿನಲ್ಲಿ ಉಳಿಯುವಂತಾಗಿದ್ದು, ಆಕೆಯ ಸಹವಾಸದಿಂದ ದೂರ ಉಳಿದಿದ್ದೇನೆ ಎಂದರು.

ಸದ್ಯ ಪ್ರಕರಣ ಕೋರ್ಟ್ ನಲ್ಲಿದ್ದು, ವಿವಾದ ಕ್ಲಿಯರ್ ಆದ ನಂತರ ಮತ್ತೆ ವಿದೇಶಕ್ಕೆ ಹೋಗುತ್ತೇನೆ. ಎಂದು ಯೂಸುಫ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!