Wednesday, June 3, 2026
Homeತಾಜಾ ಸುದ್ದಿಹಳಿ ತಪ್ಪಿ ನಿಲ್ದಾಣದೊಳಗೆ ನುಗ್ಗಿದ ರೈಲು: ಅದೃಷ್ಟವಶಾತ್‌ ತಪ್ಪಿದ ಭಾರೀ ದುರಂತ

ಹಳಿ ತಪ್ಪಿ ನಿಲ್ದಾಣದೊಳಗೆ ನುಗ್ಗಿದ ರೈಲು: ಅದೃಷ್ಟವಶಾತ್‌ ತಪ್ಪಿದ ಭಾರೀ ದುರಂತ

- Advertisement -
- Advertisement -

ತಮಿಳುನಾಡು: ಸ್ಥಳೀಯ ರೈಲೊಂದು ಹಳಿ ತಪ್ಪಿ ನಿಲ್ದಾಣದೊಳಗೆ ನುಗ್ಗಿದ ಘಟನೆ ಚೆನ್ನೈ ಬೀಚ್ ನ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಘಟನೆ ಭಾನುವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ದಕ್ಷಿಣ ರೈಲ್ವೆ ಮೂಲಗಳು ಮಾಹಿತಿ ನೀಡಿವೆ.

ಬೇರೆ ಪ್ಲಾಟ್ ಫಾರ್ಮ್ ನಿಂದ , ಪ್ಲಾಟ್ ಫಾರ್ಮ್ 1ಕ್ಕೆ ಈ ರೈಲು ಬೋಗಿಯನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಾಂತರಿಸುವ ವೇಳೆ ನಿಯಂತ್ರಣ ಕಳೆದುಕೊಂಡ ರೈಲು, ನೇರವಾಗಿ ನಿಲ್ದಾಣದ ಒಳಗೆ ನುಗ್ಗಿದೆ. ವೇಗವಾಗಿ ಬಂದು ಅಲ್ಲಿದ್ದ ಗೋಡೆಗೆ ಗುದ್ದಿ ನಿಂತಿದೆ. ಒಂದು ವೇಳೆ ಗೋಡೆ ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದು ದಕ್ಷಿಣ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ನಿಯಂತ್ರಣ ತಪ್ಪಿರುವುದನ್ನು ಅರಿತ ರೈಲಿನ ಆಪರೇಟರ್ ಕೂಡಲೇ ರೈಲಿನಿಂದ ಜಿಗಿದಿದ್ದು, ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬ್ರೇಕ್ ಫೇಲ್ ಆಗಿದ್ದರಿಂದ ರೈಲು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ತನಿಖೆಗ ಆದೇಶಿಸಲಾಗಿದೆ. ರೈಲು ಅಪಘಾತದಿಂದಾಗಿ ನಿಲ್ದಾಣದ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿ ಸಂಭವಿಸಿದ್ದು, ಕಾಮಗಾರಿ ಆರಂಭವಾಗಿದೆ. ಇನ್ನು ಅಪಘಾತದಿಂದಾಗಿ ಬೇರೆ ರೈಲಿನ ಸಮಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

- Advertisement -

Latest News

error: Content is protected !!