Friday, July 5, 2024
Homeಕರಾವಳಿಮಂಗಳೂರುಮಂಗಳೂರು: ತಾವೇ ಹಾರೆ ಹಿಡಿದು ಕಾಂಕ್ರಿಟ್ ಹಾಕಿ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸರು; ನಿಮ್ಮ ಕೆಲಸಕ್ಕೆ...

ಮಂಗಳೂರು: ತಾವೇ ಹಾರೆ ಹಿಡಿದು ಕಾಂಕ್ರಿಟ್ ಹಾಕಿ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸರು; ನಿಮ್ಮ ಕೆಲಸಕ್ಕೆ ಹ್ಯಾಟ್ಸಾಫ್ ಅಂದ ವಾಹನ ಸವಾರರು

spot_img
- Advertisement -
- Advertisement -

ಮಂಗಳೂರು: ಮಂಗಳೂರು: ತಾವೇ ಕೈಯಲ್ಲಿ ಹಾರೆ ಹಿಡಿದು ಯೂನಿಫಾರ್ಮ್ ನಲ್ಲೇ ಟ್ರಾಫಿಕ್ ಪೊಲೀಸರು  ಕಾಂಕ್ರಿಟ್ ಹಾಕಿ ಹೊಂಡ ಮುಚ್ಚಿದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಕೆಪಿಟಿ ಜಂಕ್ಷನ್‌ ಬಳಿ ನಡೆದಿದೆ. ಇನ್ನು  ಟ್ರಾಫಿಕ್ ಪೊಲೀಸರ ಕೆಲಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳವಾರ ಬೆಳಗ್ಗೆ ಸಂಚಾರ ಪೂರ್ವ (ಕದ್ರಿ) ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಈಶ್ವರ್‌ ಸ್ವಾಮಿ, ಸಿಬ್ಬಂದಿ ಸಿದ್ದರಾಜು ಮತ್ತು ಮಂಜು ಅವರು ಕಾಂಕ್ರೀಟ್‌ನ್ನು ತರಿಸಿ ತಾವೇ ಹಾರೆ ಹಿಡಿದು ಹೊಂಡಕ್ಕೆ ಹಾಕಿ ಸಮತಟ್ಟುಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಬ್‌ ಇನ್‌ಸ್ಪೆಕ್ಟರ್‌ ಈಶ್ವರ್‌ ಸ್ವಾಮಿಯವರು, ಇತ್ತೀಚೆಗೆ ಇಲ್ಲಿನ ರಸ್ತೆ ಹೊಂಡಕ್ಕೆ ಬಿದ್ದು ಸ್ಕೂಟರ್‌ ಸವಾರರಾದ ಹಿರಿಯ ನಾಗರಿಕರೋರ್ವರು ಗಾಯಗೊಂಡಿದ್ದರು. ಅದನ್ನು ನೋಡಿದ ಮೇಲೆ ಇನ್ನು ಅನಾಹುತಗಳು ಆಗೋದು ಬೇಡ ಎಂದು ಮರುದಿನವೇ ಕಾಂಕ್ರೀಟ್‌ ತರಿಸಿ ಹಾಕಿದ್ದೆ. ಆದರೆ ಮಳೆ ಹೆಚ್ಚಿದ್ದರಿಂದ ಅದು ಸ್ವಲ್ಪ ಮಾತ್ರವೇ ಉಳಿದಿತ್ತು. ಮಂಗಳವಾರ ಮತ್ತೊಮ್ಮೆ ಕಾಂಕ್ರೀಟ್‌ ತರಿಸಿ ಹಾಕಿಸಿದ್ದೇವೆ. ಮಳೆ ಕಡಿಮೆಯಾಗಿದ್ದರಿಂದ ಅನುಕೂಲವಾಗಿದೆ ಎಂದಿದ್ದಾರೆ.

ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಕೂಡ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈಶ್ವರ್‌ ಸ್ವಾಮಿ ಮತ್ತು ಸಿಬ್ಬಂದಿ ಕೆಪಿಟಿ ಜಂಕ್ಷನ್‌ ಮತ್ತು ನಂತೂರು ಜಂಕ್ಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಕಳೆದ ಬಾರಿ ನಂತೂರಿನಲ್ಲಿ ಇದೇ ರೀತಿ ಹೊಂಡಗಳು ಆದಾಗ ಅಲ್ಲಿಗೂ ಕಾಂಕ್ರೀಟ್‌ ತರಿಸಿ ಹಾಕಿದ್ದರು.ಟ್ರಾಫಿಕ್ ಪೊಲೀಸರ ಈ ಕಾಳಜಿಗೆ ವಾಹನ ಸವಾರರು ಹ್ಯಾಟ್ಸಾಫ್ ಹೇಳ್ತಿದ್ದಾರೆ.

- Advertisement -
spot_img

Latest News

error: Content is protected !!