Wednesday, May 8, 2024
Homeಕರಾವಳಿಉಡುಪಿಕಾರ್ಕಳ: ಆಳ ಕಂದಕಕ್ಕೆ ಉರುಳಿ ಬಿದ್ದ ಟಿಪ್ಪರ್: ಚಾಲಕ ಸ್ಥಳದಲ್ಲೇ ಸಾವು

ಕಾರ್ಕಳ: ಆಳ ಕಂದಕಕ್ಕೆ ಉರುಳಿ ಬಿದ್ದ ಟಿಪ್ಪರ್: ಚಾಲಕ ಸ್ಥಳದಲ್ಲೇ ಸಾವು

spot_img
- Advertisement -
- Advertisement -

ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ ಲಾರಿಯೊಂದು ಆಳ ಕಂದಕಕ್ಕೆ ಉರುಳಿದ್ದು, ಚಾಲಕ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ  ಸೂಡ ಗ್ರಾಮದ ಜಲ್ಲಿ ಕ್ರಶರ್‌ ಘಟಕದಲ್ಲಿ ನಡೆದಿದೆ. ಟಿಪ್ಪರ್ ಲಾರಿಯೊಂದು ಕಲ್ಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೊಹಮ್ಮದ್ ಆಸಿಫ್ ಮೃತಪಟ್ಟ ಚಾಲಕ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!