Tuesday, May 7, 2024
Homeಕರಾವಳಿಉಡುಪಿಕಾಪು: ಬಿಲ್ಲವ ಸಮಾಜದ ಮೂರು ಬೇಡಿಕೆಗಳು ತುರ್ತಾಗಿ ಈಡೇರಲಿದೆ: ಸಿಎಂ ಬೊಮ್ಮಾಯಿ ಭರವಸೆ

ಕಾಪು: ಬಿಲ್ಲವ ಸಮಾಜದ ಮೂರು ಬೇಡಿಕೆಗಳು ತುರ್ತಾಗಿ ಈಡೇರಲಿದೆ: ಸಿಎಂ ಬೊಮ್ಮಾಯಿ ಭರವಸೆ

spot_img
- Advertisement -
- Advertisement -

ಕಾಪು : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ, ಬಿಲ್ಲವ ಸಮಾಜವನ್ನು ಪ್ರವರ್ಗ (1) ಕ್ಕೆ ಸೇರ್ಪಡೆಗೊಳಿಸುವುದು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಬಡ್ಡಿ ರಹಿತ ಸಾಲ, ಗರಡಿ ಅರ್ಚಕರಿಗೆ ಮಾಶಾಸನ, ಸಾಂಪ್ರಧಾಯಿಕ ಮೂರ್ತೆದಾರಿಕೆಗೆ ಪ್ರೋತ್ಸಾಹ ಮತ್ತು ಆಕಸ್ಮಿಕ ಅವಘಡದಿಂದ ಮೃತರಾಗುವ ಮೂರ್ತೆದಾರರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ನೇತೃತ್ವದಲ್ಲಿ ಮನವಿ ನೀಡಲಾಯಿತು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಗರೊಡಿ ಅರ್ಚಕರಿಗೆ ಮಾಶಾಸನ, ಮೂರ್ತೆದಾರಿಕೆಗೆ ಪ್ರೋತ್ಸಾಹ ಮತ್ತು ಆಕಸ್ಮಿಕ ಅವಘಡ ಸಂಧರ್ಭದಲ್ಲಿ ಪರಿಹಾರ ನೀಡಿಕೆ, ನಾರಾಯಣಗುರು ಅನುಯಾಯಿಗಳಾಗಿರುವ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಮತ್ತು ಸ್ವ ಉದ್ಯೋಗ ನಡೆಸುತ್ತಿರುವವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿಕೆಗೆ ಪ್ರಥಮ ಆದ್ಯತೆಯಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶ್ವಮಾನವತಾವಾದದ ಸಂದೇಶವು ಸಾರ್ವಕಾಲಿಕ ಸತ್ಯವಾಗಿದ್ದು, ಇದನ್ನು ಅನುಸರಿಸಿಕೊಂಡು ಬರುತ್ತಿರುವ ಕರಾವಳಿಯ ಬಿಲ್ಲವ ಸಮುದಾಯ ಸೇರಿದಂತೆ ಈಡಿಗ, ನಾಮಧಾರಿ ಹಾಗೂ ಇತರೇ ಉಪಪಂಗಡಗಳ ಬೇಡಿಕೆಯನ್ನು ಈಡೇರಿಸಲು ಸರಕಾರ ಸಿದ್ಧವಿದೆ. ಈ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಗಮಿಸುವಂತೆ ಮುಖ್ಯಮಂತ್ರಿಗಳು ನಿಯೋಗಕ್ಕೆ ಸೂಚನೆ ನೀಡಿದರು.

- Advertisement -
spot_img

Latest News

error: Content is protected !!