- Advertisement -
- Advertisement -
ಮಂಗಳೂರು: 26/11ರ ಮುಂಬೈ ದಾಳಿಯ ರೀತಿಯಲ್ಲೇ ಮತ್ತೊಂದು ದಾಳಿಸುವ ಬಗ್ಗೆ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಪಾಕಿಸ್ತಾನ ಮೂಲದ ದೂರವಾಣಿ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ.
26/11ರಂದು ಭಯೋತ್ಪಾದಕರು ಸಮುದ್ರ ಮಾರ್ಗವನ್ನು ಬಳಸಿ ದಾಳಿ ನಡೆಸಿದ್ರು. ಹಾಗಾಗಿ ಅರಬ್ಬಿ ಸಮುದ್ರದ ಕರಾವಳಿಯಲ್ಲಿ ವಿಶೇಷ ನಿಗಾ ಇರಿಸಲಾಗಿದೆ.
ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೂ ಮುನ್ನಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ ಎಂದು ಕರಾವಳಿ ಕಾವಲು ವಿಭಾಗದ ಎಸ್ಪಿ ಅಬ್ದುಲ್ ಅಹ್ಮದ್ ತಿಳಿಸಿದ್ದಾರೆ.
- Advertisement -