Thursday, May 16, 2024
Homeತಾಜಾ ಸುದ್ದಿಮಾಂಸ ಪ್ರಿಯರಿಗೆ ದುಬಾರಿ ಬೆಲೆಯ ಶಾಕ್:‌ ರಾಜ್ಯದಲ್ಲಿ ಕೆಜಿಗೆ ₹300ರ ಗಡಿ ತಲುಪಿದ ಚಿಕನ್ ದರ

ಮಾಂಸ ಪ್ರಿಯರಿಗೆ ದುಬಾರಿ ಬೆಲೆಯ ಶಾಕ್:‌ ರಾಜ್ಯದಲ್ಲಿ ಕೆಜಿಗೆ ₹300ರ ಗಡಿ ತಲುಪಿದ ಚಿಕನ್ ದರ

spot_img
- Advertisement -
- Advertisement -

ರಾಜ್ಯದಲ್ಲಿ ಮಳೆಯಿಂದಾಗಿ ತರಕಾರಿ ದರ ಏರಿಕೆಯಾಗಿದೆ. ಕೇವಲ ತರಕಾರಿ ಮಾತ್ರವಲ್ಲ ಮಾಂಸ ಪ್ರಿಯರಿಗೂ ದುಬಾರಿ ಬೆಲೆಯ ಶಾಕ್ ನೀಡಿದೆ. ಕೋಳಿ ಮಾಂಸ ಹಾಗು ಮೊಟ್ಟೆ ತಿನ್ನುವವರೆಗೆ ಈಗ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಚಿಕನ್ ದರವು ಈಗ ಪ್ರತಿ ಕೆಜಿಗೆ 300 ರೂಪಾಯಿಗೆ ಏರಿಕೆಯಾಗಿದೆ. ಮೊಟ್ಟೆಯೂ ಸಹ ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕವಾಗಿದೆ. ಇದಕ್ಕೆಲ್ಲ ಕಾರಣ ಕೋಳಿ ಸಾಕಾಣಿಕೆಗೆ ಆಗುವ ಖರ್ಚು ಅಧಿಕವಾಗಿರುವುದು ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಮಾಂಸ ಪ್ರಿಯರು ಮಟನ್ ಅಥವಾ ಚಿಕನ್ ಸವಿಯಲು ಇಷ್ಟ ಪಡುತ್ತಾರೆ. ಮಟನ್ ದರವು ಈಗಾಗಲೇ ಪ್ರತಿ ಕೆಜಿಗೆ 600 ರೂಪಾಯಿ ಗಡಿ ದಾಟಿದೆ. ಈ ಮಧ್ಯೆ ಚಿಕನ್ ದರವು 150 ರೂಪಾಯಿಯೊಳಗೆ ಇದ್ದದ್ದು ಈಗ ಬರೋಬ್ಬರಿ 300 ರೂಪಾಯಿಗೇರಿದೆ. ಪ್ರತಿ ಕೆಜಿ ಚಿಕನ್ ಗೆ 300 ರೂಪಾಯಿ ಆಗಿರುವುದರಿಂದ ಚಿಕನ್ ಪ್ರಿಯರು ಖರೀದಿಸಲು ಹಿಂಜರಿಯುತ್ತಿದ್ದಾರೆ.

ಒಂದು ಕಡೆ ತರಕಾರಿ ದರವು ಏರಿಕೆ. ತರಕಾರಿ ಬೇಡ ಚಿಕನ್ ತಿನ್ನೋಣ ಅಂದುಕೊಂಡರೆ ಚಿಕನ್ ದರವು ಸಹ ದುಬಾರಿಯಾಗಿದೆ. ಇದೇ ಪ್ರಥಮ ಭಾರಿ ಚಿಕನ್ ದರವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಕಾರಣ ಏನು ಎಂದು ಪೌಲ್ಟ್ರಿ ಫಾರ್ಮ್ ಮಾಲೀಕರನ್ನು ಕೇಳಿದರೆ ಕೋಳಿ ಸಾಕಾಣಿಕೆ ವೆಚ್ಚ ಹಾಗಿದೆ, ಈ ಹಿಂದೆ ಮೆಕ್ಕೆ ಜೋಳವು ಪ್ರತಿ ಕ್ವಿಂಟಾಲ್ ಗೆ 2000-2500 ರೂಪಾಯಿ ಇದ್ದದ್ದು ಈಗ 3000-3500 ರೂಪಾಯಿಗೆ ಏರಿಕೆಯಾಗಿದೆ. ಸೋಯಾ ದರವು ಸಹ ಪ್ರತಿ ಟನ್ ಗೆ 30000 ರೂಪಾಯಿಗೆ ಹೆಚ್ಚಾಗಿದೆ. ಇದರೊಂದಿಗೆ ಕಾರ್ಮಿಕರ ಕೂಲಿ ಸೇರಿ ಎಲ್ಲಾ ದರ ಹೆಚ್ಷಳವಾಗಿರುವುದರಿಂದ ಕೋಳಿ ಮಾಂಸದ ದರವು ಏರಿಕೆಯಾಗಿದೆ ಎನ್ನುತ್ತಾರೆ.

ಚಿಕನ್ ಬೇಡ ಆಮ್ಲೇಟ್ ತಿನ್ನೋಣ ಅಂದುಕೊಂಡರೂ ಮೊಟ್ಟೆ ದರವು ಈಗ ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಾಂಸ, ತರಕಾರಿ ಹೆಚ್ಷಳದಿಂದಾಗಿ ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ಹೊರೆಯಾಗಿದೆ. ರಾಜ್ಯದಲ್ಲಿಯೇ ಅಧಿಕ ಪೌಲ್ಟ್ರಿ ಫಾರ್ಮಗಳನ್ನು ಹೊಂದಿದ ಖ್ಯಾತಿ ಕೊಪ್ಪಳ ಜಿಲ್ಲೆಗಿದೆ. ಇಲ್ಲಿ 14 ಕ್ಕೂ ಅಧಿಕ ಬೃಹತ್ ಪೌಲ್ಟ್ರಿ ಫಾರ್ಮ್ ಗಳಿವೆ. ಇವುಗಳೊಂದಿಗೆ ನೂರಾರು ಸಣ್ಣ ಪುಟ್ಟ ಫೌಲ್ಟ್ರಿ ಫಾರ್ಮಗಳಿವೆ. ಜಿಲ್ಲೆಯಲ್ಲಿ ಸುಮಾರು 21 ಲಕ್ಷ ಕ್ಕೂ ಕೋಳಿಗಳಿವೆ ಎಂಬ ಅಂದಾಜು ಮಾಡಲಾಗಿದೆ. ಇಲ್ಲಿಂದ ನಿತ್ಯ ಸುಮಾರು 15 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗಿ ಬೇರೆ ಬೇರೆ ಕಡೆ ಸರಬರಾಜು ಆಗುತ್ತಿದೆ

- Advertisement -
spot_img

Latest News

error: Content is protected !!