Wednesday, June 26, 2024
HomeUncategorizedರೇಣುಕಾಸ್ವಾಮಿಯನ್ನು ಕೊಲ್ಲಲು ಬಳಸಿದ್ದ ಮೆಗ್ಗಾರ್ ಸಾಧನವನ್ನು ವಶಕ್ಕೆ ಪಡೆದ ಪೊಲೀಸರು

ರೇಣುಕಾಸ್ವಾಮಿಯನ್ನು ಕೊಲ್ಲಲು ಬಳಸಿದ್ದ ಮೆಗ್ಗಾರ್ ಸಾಧನವನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಬಳಸಿದ್ದ ಎಲೆಕ್ಟ್ರಿಕಲ್ ಮೆಗ್ಗಾರ್‌ ಸಾಧನವನ್ನು ಕೊಲೆಗೂ ಪತ್ತೆಹಚ್ಚುವಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣದ 9ನೇ ಆರೋಪಿ ಧನ್ ರಾಜನನ್ನು ಬಂಧಿಸಿದ್ದಾರೆ. ಇದನ್ನು ವಿಚಾರಣೆ ನಡೆಸಿದಾಗ ಈತನಿಗೂ ಈ ಪ್ರಕರಣಕ್ಕೆ ನೇರ ಸಂಬಂಧವಿಲ್ಲ ಅನ್ನೋದು ಗೊತ್ತಾಗಿದೆ.

ಧನ್ ರಾಜ್ ಜೊತೆಗೆ ಕೆಲಸ ಮಾಡುತ್ತಿದ್ದವನ ಮಾತು ಕೇಳಿ ಎಲೆಕ್ಟ್ರಿಕ್ ಡಿವೈಸ್ ತಂದು ಸಹಾಯ ಮಾಡಿದ್ದ ಎನ್ನಲಾಗಿದೆ. ಜೂನ್‌ 8 ರಂದು ಮೆಗ್ಗಾರ್ ಸಾಧನದ ಜೊತೆ ಧನ್ ರಾಜ್ ನ್ನು ಪಟ್ಟಣಗೆರೆ ಶೆಡ್‌ಗೆ ನಂದೀಶ್ ಕರೆಸಿಕೊಂಡಿದ್ದ. ಪ್ಲ್ಯಾನ್‌ನಂತೆ ರಾಜುವಿನಿಂದ ಎಲೆಕ್ಟ್ರಿಕಲ್ ಮೆಗ್ಗಾರ್‌ ಯಂತ್ರವನ್ನು ನಂದೀಶ್ ತರಿಸಿಕೊಂಡಿದ್ದರು. ಆ ಮೆಗ್ಗಾರ್‌ ಯಂತ್ರವನ್ನು ಬಳಸಿ ರೇಣುಕಾಸ್ವಾಮಿಗೆ ಆರೋಪಿಗಳು ಕರೆಂಟ್ ಶಾಕ್ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.ಸದ್ಯ ರಾಜುವನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಾಜು ಜೊತೆ ಎಲೆಕ್ಟ್ರಿಕಲ್ ಮೆಗ್ಗರ್ ಯಂತ್ರ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!