- Advertisement -
- Advertisement -
ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 100ಕ್ಕೂ ಅಧಿಕ ಹಳೆಯ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆಯಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಈ ಹಿಂದೆ ರೌಡಿ ಶೀಟರ್ ಗಳಾಗಿದ್ದು, ಪ್ರಸ್ತುತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರದ ಹಿನ್ನಲೆಯಲ್ಲಿ ಅಂಥವರ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗುತ್ತದೆ.
ರೌಡಿ ಶೀಟರ್ ನಿಂದ ಮುಕ್ತವಾಗುವವರೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದಕ್ಕಾಗಿ ಡಿ.೧೬ರಂದು ನಗರದಲ್ಲಿ ಮಂಗಳೂರು ನಗರ ಪೊಲೀಸ್ ವತಿಯಿಂದ ಪರಿವರ್ತನಾ ಸಭೆ ಆಯೋಜಿಸಆಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಹಿಂದೆಯೂ ಇದೇ ರೀತಿ ರೌಡಿಶೀಟ್ ಪಟ್ಟಿಯಿಂದ ಕೆಲವು ರೌಡಿಗಳ ಹೆಸರನ್ನು ಕೈಬಿಟ್ಟು ಸಮಾಜದಲ್ಲಿ ಪರಿವರ್ತನೆ ಹೊಂದಲು ಅವಕಾಶ ನೀಡಲಾಗಿತ್ತು.
- Advertisement -