Friday, July 4, 2025
Homeಕರಾವಳಿಧರ್ಮ ದೈವ ತಂಡದಿಂದ ನಿರ್ಮಾಣಗೊಂಡ ಹೊಸ ಚಿತ್ರ ‘ಪರಿಣಿತ’; ಚಿತ್ರದ ಮೊದಲ ನೋಟದಲ್ಲೇ ಗಮನ ಸೆಳೆದ...

ಧರ್ಮ ದೈವ ತಂಡದಿಂದ ನಿರ್ಮಾಣಗೊಂಡ ಹೊಸ ಚಿತ್ರ ‘ಪರಿಣಿತ’; ಚಿತ್ರದ ಮೊದಲ ನೋಟದಲ್ಲೇ ಗಮನ ಸೆಳೆದ ಅಕ್ಷಯ್ ರೈ

spot_img
- Advertisement -
- Advertisement -

ರಿದ್ವಿ ಕ್ರಿಯೆಷನ್ ಅಡಿಯಲ್ಲಿ ಧರ್ಮ ದೈವ ತಂಡದಿಂದ ನಿರ್ಮಾಣಗೊಂಡ ಹೊಸ ಚಿತ್ರ ‘ಪರಿಣಿತ’ದ ಮೊದಲ ನೋಟ ಬಿಡುಗಡೆಗೊಂಡಿದ್ದು, ನಟ ಅಕ್ಷಯ್ ರೈ ಅವರ ಮೊದಲ ನೋಟ ಎಲ್ಲರ ಗಮನ ಸೆಳೆದಿದೆ.

ರಿದ್ವಿ ಕ್ರಿಯೆಷನ್ ಅಡಿಯಲ್ಲಿ ಸುಧೀರ್ ಮತ್ತು ಕವಿತಾ ಸುಧೀರ್ ನಿರ್ಮಾಣಮಾಡುತ್ತಿರುವ ಪರಿಣಿತ ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಹಮೀದ್ ಪುತ್ತೂರು ಬರೆದಿದ್ದಾರೆ.

ಧನು ರೈ ಅವರು ಚಿತ್ರದ ಮೂರು ಪ್ರಮುಖ ವಿಭಾಗವನ್ನು ನಿರ್ವಹಿಸುತ್ತಿದ್ದು, ನಿತಿನ್ ಕಾನಾವು ಟೈಟಲ್ ಡಿಸೈನ್ ಮಾಡಿದ್ದಾರೆ. ಇನ್ನೂ ಧರ್ಮ ದೈವ ತಂಡದ ಬಹುತೇಕ ತಾಂತ್ರಿಕ ವರ್ಗವು ಈ ಚಿತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅಕ್ಷಯ್ ರೈ ಅವರು ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರು ಚಿತ್ರ ಇದಾಗಿದ್ದು, ನಾಯಕಿಯ ಬಗ್ಗೆ ಚಿತ್ರ ತಂಡ ಇನ್ನಷ್ಟೇ ಸ್ಪಷ್ಟೀಕರಣ ನೀಡಬೇಕಾಗಿದೆ.

ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ನಟ ಸುಂದರ್ ರೈ ಮಂದಾರ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸಂಪೂರ್ಣ ನಿರ್ವಹಣಾ ಕೆಲಸವನ್ನು ಸುಧಾಕರ್ ಪಡೀಲ್, ಕೌಶಿಕ್ ರೈ ತೋಟ ನಿರ್ವಹಿಸುತ್ತಿದ್ದಾರೆ. ತಂಡಕ್ಕೆ ಕೆಲವೊಂದು ಹೊಸ ಪ್ರತಿಭೆಗಳ ಸೇರ್ಪಡೆಯಾಗಿದೆ.

ಆಕೆ ಮೋಹಿನಿ ಮತ್ತು ಧರ್ಮ ದೈವ ಎನ್ನುವ ವಿಭಿನ್ನ ಚಿತ್ರ ನೀಡಿ ಗಮನ ಸೆಳೆದ ತಂಡವು ‘ಪರಿಣಿತ’ ಮೊದಲ ನೋಟ ಮೂಲಕ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟು ಮಾಡಿದೆ.

- Advertisement -
spot_img

Latest News

error: Content is protected !!