Saturday, June 28, 2025
Homeಕರಾವಳಿಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

spot_img
- Advertisement -
- Advertisement -

ಮಣಿಪಾಲ: ಕೆಲವು ದಿನಗಳ ಹಿಂದಷ್ಟೇ ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ‘ಲಕ್ಕಿ’ಯ ಅಗಲುವಿಕೆಯಿಂದ ಬೇಸರಗೊಂಡಿದ್ದ ಕಂಬಳಾಭಿಮಾನಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ. ಉಭಯ ಜಿಲ್ಲೆಯ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.

‘ನಾಗು’ ಕೋಣವು ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಬೈಂದೂರಿನಿಂದ ಬಂಢಾರಮನೆ ಸೇರಿದ್ದ ನಾಗು, ಬಳಿಕ ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ ಸೇರಿದ್ದ. ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು.

ಕೂಟಗಳಲ್ಲಿ ಸಕ್ರಿಯವಾಗಿದ್ದ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಕಂಬಳ ಕ್ಷೇತ್ರ ಕಳೆದುಕೊಂಡಿದೆ.

- Advertisement -
spot_img

Latest News

error: Content is protected !!