Sunday, June 7, 2026
Homeಕರಾವಳಿಶಂಕಿತ ಉಗ್ರ ಮಾಝ್​​​ ತಂದೆ ಮನೀರ್ ಅಹಮದ್ ಹೃದಯಾಘಾತದಿಂದ ನಿಧನ ಹಿನ್ನೆಲೆ: ಮಾಝ್ ಗೆ ತಂದೆಯ...

ಶಂಕಿತ ಉಗ್ರ ಮಾಝ್​​​ ತಂದೆ ಮನೀರ್ ಅಹಮದ್ ಹೃದಯಾಘಾತದಿಂದ ನಿಧನ ಹಿನ್ನೆಲೆ: ಮಾಝ್ ಗೆ ತಂದೆಯ ಅಂತಿಮ ದರ್ಶನಕ್ಕೆ ಅನುಮತಿ ನೀಡಿದ ಮಾಜಿಸ್ಟ್ರೇಟ್

- Advertisement -
- Advertisement -

ಮಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಶಂಕಿತ ಉಗ್ರ ಮಾಝ್ ತಂದೆ ಮನೀರ್ ಅಹಮದ್, ಚಿಕಿತ್ಸೆ ಫಲಿಸದೇ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಹೊಂದಿದ್ದಾರೆ.

ಇಂದು ಅವರ ಅಂತ್ಯಕ್ರಿಯೆ ನೆರವೇರಲಿದ್ದು ಶಂಕಿತ ಉಗ್ರ ಮಾಝ್ ​ನಿಗೆ ಮ್ಯಾಜಿಸ್ಟ್ರೇಟ್ ತಂದೆಯ ಅಂತಿಮ ದರ್ಶನದಲ್ಲಿ ಭಾಗಿಯಾಗಲು ಅನುಮತಿ ನೀಡಿದ್ದಾರೆ.

ಶಿವಮೊಗ್ಗ  ತೀರ್ಥಹಳ್ಳಿ ಮೂಲದವರಾದ ಮುನೀರ್ ಅಹಮದ್ ತಮ್ಮ ಮಕ್ಕಳ ಶಿಕ್ಷಣದ ಕಾರಣದಿಂದ ಮಂಗಳೂರಿನಲ್ಲಿಯೇ ನೆಲೆಸಿದ್ದರು‌. ಆದರೆ ತಮ್ಮ ಮಗ ಮಾಝ್ ಉಗ್ರರೊಂದಿಗೆ ನಂಟು ಹೊಂದಿದ ವಿಷಯ ಕೇಳಿ ಮುನೀರ್ ಅಹಮದ್ ನೊಂದಿದ್ದರು. ಇದೇ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿರಬಹುದು ಎನ್ನಲಾಗಿದೆ. ಮುನೀರ್ ಅಹಮದ್ ತೀರ್ಥಹಳ್ಳಿಯ ಪ್ರತಿಷ್ಟಿತ ಕುಟುಂಬದವರಾಗಿದ್ದು, ಮುನೀರ್ ಅಹಮದ್ ತಂದೆ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದರು.

- Advertisement -

Latest News

error: Content is protected !!