Monday, June 8, 2026
Homeಕರಾವಳಿರಾಮಕುಂಜ: ಶ್ರೀ ವಿಶ್ವೇಶತೀರ್ಥರ ಸ್ಮಾರಕ ಧ್ಯಾನಕೇಂದ್ರ ಲೋಕಾರ್ಪಣೆ

ರಾಮಕುಂಜ: ಶ್ರೀ ವಿಶ್ವೇಶತೀರ್ಥರ ಸ್ಮಾರಕ ಧ್ಯಾನಕೇಂದ್ರ ಲೋಕಾರ್ಪಣೆ

- Advertisement -
- Advertisement -

ದ ಕ ಜಿಲ್ಲೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ದಶಕಗಳ ಹಿಂದೆ ಕೀರ್ತಿಶೇಷ ಪದ್ಮವಿಭೂಷಣ ಪುರಸ್ಕೃತ ಯತಿ ಶ್ರೇಷ್ಠರಾದ ಶ್ರೀ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟು ಯಶಸ್ವಿಯಾಗಿ ಮುನ್ನಡೆಸಲ್ಪಡುತ್ತಿರುವ ಶ್ರೀರಾಮಕುಂಜೇಶ್ವರ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುತ್ಥಳಿ ಮತ್ತು ಅವರ ಸಂಸ್ಮರಣಾರ್ಥ ನಿರ್ಮಿಸಲಾಗಿರುವ ಧ್ಯಾನಕೇಂದ್ರದ ಲೋಕಾರ್ಪಣೆಯು ನೆರವೇರಿತು .

ಉಡುಪಿಯ ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೂ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಪುತ್ಥಳಿ ಅಮಾವರಣ ಮತ್ತು ಧ್ಯಾನಕೇಂದ್ರ ಉದ್ಘಾಟಿಸಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀ ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು , ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

- Advertisement -

Latest News

error: Content is protected !!