Sunday, May 5, 2024
Homeತಾಜಾ ಸುದ್ದಿಅನ್ಯ ಧರ್ಮದ ಯುವಕನನ್ನು ವಿವಾಹವಾದ ಯುವತಿಯ ಅಂತ್ಯ ಸಂಸ್ಕಾರ ನಡೆಸಿದ ಕುಟುಂಬಸ್ಥರು

ಅನ್ಯ ಧರ್ಮದ ಯುವಕನನ್ನು ವಿವಾಹವಾದ ಯುವತಿಯ ಅಂತ್ಯ ಸಂಸ್ಕಾರ ನಡೆಸಿದ ಕುಟುಂಬಸ್ಥರು

spot_img
- Advertisement -
- Advertisement -

ಭೋಪಾಲ್: ಅನ್ಯ ಧರ್ಮದ ಯುವಕನನ್ನು ವಿವಾಹವಾದ ಯುವತಿಯೊಬ್ಬಳ ಕುಟುಂಬಸ್ಥರು ಆಕೆಯ  ಅಂತ್ಯ ಸಂಸ್ಕಾರ ನಡೆಸಿದ ಘಟನೆ ಭೋಪಾಲ್ ನ ಜಬಲ್ಪುರದಲ್ಲಿ ನಡೆದಿದೆ.

ಯುವತಿಯ ಅನ್ಯ ಧರ್ಮದ ಯುವಕನನ್ನು ವಿವಾಹವಾಗಿದ್ದಕ್ಕೆ ಕೋಪಗೊಂಡ ಆಕೆಯ ಕುಟುಂಬದವ್ರು ಅವಳನ್ನು ತಿರಸ್ಕರಿಸಿ ಅವಳ ಅಂತ್ಯಕ್ರಿಯೆ ನಡೆಸಿದೆ. ಮದುವೆ ಕಾರ್ಡ್‌ಗಳಿಗೆ ಬದಲಾಗಿ, ಯುವತಿಯ ಕುಟುಂಬವು “ಏಪ್ರಿಲ್ 2 ರಂದು ನಿಧನರಾದರು” ಎಂದು ಸಂಬಂಧಿಕರು ಮತ್ತು ಸಮಾಜದ ಸದಸ್ಯರಿಗೆ ತಿಳಿಸಲು ಸಂತಾಪ ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಿದ್ದಾರೆ. ಅಲ್ಲದೇ ಆಕೆಯ ಅಂತ್ಯಕ್ರಿಯೆಯ ಔತಣವನ್ನು ಏರ್ಪಡಿಸಿ ಬಳಿಕ ಪಿಂಡ ಪ್ರದಾನ ಮಾಡಿದ್ದಾರೆ.

22ರ ಹರೆಯದ ಯುವತಿ “ನಮಗೆ ನಾಚಿಕೆ ತಂದಿದ್ದಾಳೆ ಮತ್ತು ಈಗ ಅವರನ್ನು ಸತ್ತೆ ಎಂದು ಪರಿಗಣಿಸಲಾಗಿದೆ” ಎಂದು ತಾಯಿ ಹೇಳಿದ್ದಾರೆ. ಹುಡುಗಿ ಹಿಂದೂ ಆಗಿದ್ದು, ಶಾಲಾ ತರಗತಿಗಳಿಂದಲೂ ತನ್ನ ಸಹಪಾಠಿಯಾಗಿದ್ದ 25 ವರ್ಷದ ಮುಸ್ಲಿಂ ಯುವಕನನ್ನು ವರಿಸಿದ್ದಾಳೆ.ಇದರಿಂದ ಯುವತಿಯ ಮನೆಯವರು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮದುವೆಯನ್ನು “ಲವ್ ಜಿಹಾದ್” ಎಂದು ಕರೆದ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು,

ನಮ್ಮ ಮಗಳು ಏ.2 ರಂದು ಕೊನೆಯುಸಿರೆಳೆದಿದ್ದಾಳೆ. ಆಕೆ ಕುಪುತ್ರಿ, ಅವಳಿಗೆ ನರಕದಲ್ಲಿ ಸ್ಥಾನ ಸಿಗಲಿ ಎಂದು ಆಕೆಯ ತಂದೆ ಹೇಳಿದ್ದಾರೆ.ಜೂನ್ ನಲ್ಲಿ ಉಜ್ಮಾ ಫಾತಿಮಾ ಅಲಿಯಾಸ್ ಅನಾಮಿಕಾಳ ಮದುವೆಯ ಕರೆಯೋಲೆ ವೈರಲ್ ಆಗಿತ್ತು. ಆನಂತರ ಆಕೆಯ ತಾಯಿಯೇ ಇದನ್ನು ಲವ್ ಜಿಹಾದ್ ಎಂದು ಕರೆದು ತಮ್ಮ ಮಗಳನ್ನು ಮರಳಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು. ಆದರೆ, ಮಧ್ಯಪ್ರದೇಶ ಪೊಲೀಸರು ತಾಯಿಯ ಆರೋಪವನ್ನು ತಳ್ಳಿಹಾಕಿದ್ದರು. ಅಲ್ಲದೇ ಇದು ಇಬ್ಬರ ನಡುವಿನ ಒಮ್ಮತದ ಸಂಬಂಧ ಎಂದು ಹೇಳಿದ್ದರು.

ಹುಡುಗಿಯ ಸಹೋದರ ಅಭಿಷೇಕ್ ದುಬೆ ಅವರು ತಮ್ಮ ಸಹೋದರಿಯ ಮದುವೆಯನ್ನು ನೋಡುವ ಕನಸುಗಳನ್ನು ಹೊಂದಿದ್ದರು ಆದರೆ ಆಕೆಯ ಹಠಮಾರಿತನವು ಅವರ ಕುಟುಂಬದ ಎಲ್ಲಾ ಆಕಾಂಕ್ಷೆಗಳನ್ನು ಮುರಿಯುವಂತೆ ಮಾಡಿದೆ ಎಂದು ಹೇಳಿದ್ದಾರೆ.ನಾನು ಆಕೆ ಬದುಕಿರುವಾಗಲೆ ಪಿಂಡ ದಾನ ಮಾಡಬೇಕಾದ ದಿನಗಳನ್ನು ನೋಡಬೇಕು ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ..

- Advertisement -
spot_img

Latest News

error: Content is protected !!