Thursday, June 4, 2026
Homeತಾಜಾ ಸುದ್ದಿಸುಳ್ಯದಲ್ಲಿ ಇಂದು ಮಧ್ಯಾಹ್ನ ಮತ್ತೆ ಕಂಪಿಸಿದ ಭೂಮಿ: ಜನರ ಆತಂಕಕ್ಕೆ ಕಾರಣವಾದ ನಿರಂತರ ಲಘು ಭೂಕಂಪನ

ಸುಳ್ಯದಲ್ಲಿ ಇಂದು ಮಧ್ಯಾಹ್ನ ಮತ್ತೆ ಕಂಪಿಸಿದ ಭೂಮಿ: ಜನರ ಆತಂಕಕ್ಕೆ ಕಾರಣವಾದ ನಿರಂತರ ಲಘು ಭೂಕಂಪನ

- Advertisement -
- Advertisement -

ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ. ಸಂಪಾಜೆ, ಗೂನಡ್ಕ, ತೊಡಿಕಾನ, ಕುಂಡಾಡು, ಪೆರಾಜೆ, ಪತ್ತುಕುಂಜ, ಚೆಂಬು ಮತ್ತಿತರ ಕಡೆಗಳಲ್ಲಿ ಭೂ ಕಂಪನ ಆಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇಂದು ಮಧ್ಯಾಹ್ನ 1.21 ಕ್ಕೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ನಿರಂತರ ಲಘು ಭೂಕಂಪನಗಳು ಆಗುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ಜೂ. 25 ರಂದು ಕರಿಕೆ ಸಮೀಪ, ಜೂ. 28 ರಂದು ಎರಡು ಬಾರಿ, ಜುಲೈ 1 ರಂದು ಎರಡು ಬಾರಿ ಚೆಂಬು ಸಮೀಪ ಭೂ ಕಂಪನ ಉಂಟಾಗಿತ್ತು.

ಸುಳ್ಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೂಕಂಪನದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 1.8 ರಷ್ಟು ದಾಖಲಾಗಿದೆ ಎಂದು ಜಿಲ್ಲಾ ನೈಸರ್ಗಿಕ ವಿಕೋಪ ನಿಯಂತ್ರಣ ಪ್ರಾಧಿಕಾರದ ಮೂಲಗಳು ತಿಳಿಸಿವೆ

- Advertisement -

Latest News

error: Content is protected !!