Saturday, October 17, 2026
Homeಕರಾವಳಿಪುತ್ತೂರು: ವಿದ್ಯಾರ್ಥಿ ಎಡವಟ್ಟಿಗೆ ಕಂಡಕ್ಟರ್‌ ಬಿಟ್ಟು ಬಸ್‌ ಚಲಾಯಿಸಿದ ಚಾಲಕ: ಬೇರೆ ಬಸ್‌ನಲ್ಲಿ ಬಂದು ಕರ್ತವ್ಯದ...

ಪುತ್ತೂರು: ವಿದ್ಯಾರ್ಥಿ ಎಡವಟ್ಟಿಗೆ ಕಂಡಕ್ಟರ್‌ ಬಿಟ್ಟು ಬಸ್‌ ಚಲಾಯಿಸಿದ ಚಾಲಕ: ಬೇರೆ ಬಸ್‌ನಲ್ಲಿ ಬಂದು ಕರ್ತವ್ಯದ ಬಸ್‌ ಸೇರಿಕೊಂಡ ನಿರ್ವಾಹಕ

- Advertisement -
- Advertisement -

ಪುತ್ತೂರು: ವಿದ್ಯಾರ್ಥಿಯೊಬ್ಬ ರೈಟ್‌ ಅಂದಿದ್ದಕ್ಕೆ ಬಸ್‌ ಡ್ರೈವರ್‌ ಕಂಡಕ್ಟರ್‌ ನನ್ನ ಬಿಟ್ಟು ಬಸ್‌ ಚಲಾಯಿಸಿಕೊಂಡು ಹೋದ ಘಟನೆ ನಡೆದಿದೆ.

ಪುತ್ತೂರಿನಿಂದ ಮಂಗಳೂರಿಗೆ ತೆರಳಬೇಕಿದ್ದ ಬಸ್ ನಿಲ್ದಾಣದಲ್ಲಿ ಸ್ಟಾರ್ಟ್ ಆಗುತ್ತಿದ್ದಂತೆ ಯಾರೋ ವಿದ್ಯಾರ್ಥಿಗಳು ರೈಟ್ ಅಂದಿದ್ದಾರೆ. ತಕ್ಷಣ ಬಸ್ ಡ್ರೈವರ್ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಚಾಲಕನಿಗೆ ಕಂಡಕ್ಟರ್‌ ಬಿಟ್ಟ ಬಂದಿರೋದು ಗೊತ್ತಾಗಿದೆ. ನಂತರ ಬಸ್‌ ಸೈಡ್‌ ಗೆ ನಿಲ್ಲಿಸಿ ಕಂಡಕ್ಟರ್‌ ಗಾಗಿ ಕಾದು ಕುಳಿತಿದ್ದಾರೆ. ಹತ್ತು  ನಿಮಿಷದ ನಂತರ ಕಂಡೆಕ್ಟರ್ ಬೇರೆ ಬಸ್ ನಲ್ಲಿ ಬಂದು ಬಳಿಕ‌ ತನ್ನ ಕರ್ತವ್ಯದ ಬಸ್ ನ್ನು ತಲುಪಿದ್ದಾರೆ.

- Advertisement -

Latest News

error: Content is protected !!