- Advertisement -
- Advertisement -
ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡುವಿನಲ್ಲಿ ನಡೆದಿದೆ. ಇಲ್ಲಿನ ಸುಂದರ್ ರಾಮ್ ಶೆಟ್ಟಿ ಆಡಿಟೋರಿಯಂ ಎದುರು ಭಾಗದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಡಿಕ್ಕಿ ಹೊಡೆದಿದೆ.
ಕಾರು ಕೋಲ್ನಾಡ್ ನಿಂದ ಹಳೆಯಂಗಡಿಯ ಕಡೆ ಹೋಗುತ್ತಿದ್ದಾಗ ಏಕಾಏಕಿ ದ್ವಿಚಕ್ರ ವಾಹನ ಸವಾರ ಅಡ್ಡ ಬಂದಿದ್ದಕ್ಕೆ ಅಪಘಾತ ತಪ್ಪಿಸಲು ಹೋಗಿ ಕಾರು ಚಾಲಕ ನಿಯಂತ್ರಣ ತಪ್ಪಿದ್ದಾರೆ. ಇನ್ನು ಅಂಗಡಿಗೆ ಕೊಂಚ ಹಾನಿಯಾಗಿದ್ದು, ಕಾರು ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.
- Advertisement -