Saturday, August 29, 2026
Homeಕರಾವಳಿಉಡುಪಿಉಡುಪಿ: ಅ.18ರಂದು ನಾಪತ್ತೆಯಾಗಿದ್ದ ಮೆಡಿಕಲ್‌ ಶಾಪ್‌ ಉದ್ಯೋಗಿಯ ಮೃತದೇಹ ಪತ್ತೆ

ಉಡುಪಿ: ಅ.18ರಂದು ನಾಪತ್ತೆಯಾಗಿದ್ದ ಮೆಡಿಕಲ್‌ ಶಾಪ್‌ ಉದ್ಯೋಗಿಯ ಮೃತದೇಹ ಪತ್ತೆ

- Advertisement -
- Advertisement -

ಉಡುಪಿ: ಅ.18ರಂದು ರಾತ್ರಿ ನಾಪತ್ತೆಯಾಗಿದ್ದ ಮೆಡಿಕಲ್‌ ಶಾಪ್‌ ಉದ್ಯೋಗಿಯ ಮೃತದೇಹ ಇಂದು ಪತ್ತೆಯಾಗಿದೆ. ಪ್ರವೀಣ್ ಬೆಳ್ಳಾಡ(44) ಎಂಬುವವರು ತಾಲೂಕಿನ ನೇಜಾರು ನಿಡಂಬಳ್ಳಿ ಎಂಬಲ್ಲಿಂದ ಅ.18ರಂದು ರಾತ್ರಿ ನಾಪತ್ತೆಯಾಗಿದ್ರು. ಹತ್ತು ದಿನಗಳ ಬಳಿಕ ಇವರ ಮೃತದೇಹ ಬ್ರಹ್ಮಾವರ ತಾಲೂಕಿನ ಹಂದಾಡಿ ಕಂಬಳ ಗದ್ದೆಯ ಹೊಳೆ ಬದಿಯಲ್ಲಿ ಇಂದು ಪತ್ತೆಯಾಗಿದೆ.

ಪ್ರವೀಣ್‌ ನಾಪತ್ತೆಯಾಗಿ ಎರಡು ದಿನಗಳ ಬಳಿಕ ಬ್ರಹ್ಮಾವರ ಸೇತುವೆಯಲ್ಲಿ ಇವರ ಸ್ಕೂಟರ್ ಪತ್ತೆಯಾಗಿತ್ತು. ಆಗ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಆದರೆ ಪ್ರವೀಣ್ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಹಂದಾಡಿ ಕಂಬಳ ಗದ್ದೆಯ ಹೊಳೆ ಬದಿಯಲ್ಲಿ ಪ್ರವೀಣ್ ಮೃತದೇಹ ಪತ್ತೆಯಾಗಿದೆ.

- Advertisement -

Latest News

error: Content is protected !!